Top

ರೆಸಾರ್ಟ್‌ ವಿವಾದದಲ್ಲಿ ಸಚಿನ್‌


Asianet News Tuesday 19 July 2016 09:21 pm IST India
ರೆಸಾರ್ಟ್‌ ವಿವಾದದಲ್ಲಿ ಸಚಿನ್‌
19 Jul

ನವದೆಹಲಿ (ಜುಲೈ 19): ಉತ್ತರಾಖಂಡ್‌ನ ಡೆಹರಾಡೂನ್‌ ಜಿಲ್ಲೆಯಲ್ಲಿರುವ ಜನಪ್ರಿಯ ಪ್ರವಾಸಿ ತಾಣ ಹಿಮಚ್ಛಾದಿತ ಪ್ರದೇಶ ಮಸೂರಿಯಲ್ಲಿ ತಾನು ಹೊಂದಿರುವ ರೆಸಾರ್ಟ್‌ ಅನ್ನು ಯಾವುದೇ ಆರ್ಥಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಸ್ಪಷ್ಟಪಡಿಸಿದ್ದಾರೆ.

ಈ ರೆಸಾರ್ಟ್‌ ಹಾಗೂ ಕೇಂದ್ರ ಸರ್ಕಾರದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಡುವೆ ಉಂಟಾಗಿರುವ ವಿವಾದದ ಪರಿಹಾರಕ್ಕೆ ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್‌ ಪರ್ರಿಕರ್‌ ಮಧ್ಯಸ್ಥಿಕೆ ವಹಿಸಬೇಕೆಂದು ಕೂಡ ಸಚಿನ್‌ ಮನವಿ ಮಾಡಿದ್ದಾರೆ.

ಎನ್‌ಸಿಝಡ್‌ ಸ್ಥಳದಲ್ಲಿನ ಒಂದು ಭಾಗದಲ್ಲಿ ಟೆನಿಸ್‌ ಕೋರ್ಟ್‌ ಕಟ್ಟುತ್ತೇವೆಂದು ನಾರಂಗ್‌ ಡಿಆರ್‌ಡಿಒದಿಂದ ಅನುಮತಿ ಪಡೆದಿದ್ದರು. ಆದರೆ, ಅಲ್ಲಿ ದೊಡ್ಡ ಕಟ್ಟಡವನ್ನೇ ನಾರಂಗ್‌ ನಿರ್ಮಿಸಿದ್ದಾರೆನ್ನಲಾಗಿದೆ. ಇದೀಗ ವಿವಾದ ಎಬ್ಬಿಸಿದೆ. ರೆಸಾರ್ಟ್‌ನ ಭಾಗವಾಗಿ ನಿರ್ಮಿಸಿರುವ ಈ ಕಟ್ಟಡ ಡಿಆರ್‌ಡಿಒನ ಎನ್‌ಸಿಝಡ್‌ ವ್ಯಾಪ್ತಿಯೊಳಗಿಲ್ಲ ಎಂದು ನಾರಂಗ್‌ ಅವರ ಪ್ರತಿನಿಧಿಗಳು ವಾದ ಮಾಡುತ್ತಿದ್ದರೆ, ಡಿಆರ್‌ಡಿಒ ತಾಂತ್ರಿಕ ವಿದ್ಯಾ ಸಂಸ್ಥೆಯು ಇದು ಎನ್‌ಸಿಝಡ್‌ನ ಭಾಗವೆಂದು ಹೇಳುತ್ತಿದೆ.

ಏನಿದು ವಿವಾದ?

ತೆಂಡೂಲ್ಕರ್‌ ಅವರ ವಾಣಿಜ್ಯ ವ್ಯವಹಾರಗಳ ಪಾಲುದಾರರಾದರೂ ಆಗಿರುವ ಸ್ನೇಹಿತ ಸಂಜಯ್‌ ನಾರಂಗ್‌ ಜತೆಗಿನ ಪಾಲುದಾರಿಕೆಯಲ್ಲಿ ಸಚಿನ್‌ ಈ ರೆಸಾರ್ಟ್‌ ಕೊಂಡಿದ್ದು, ಮಸೌರಿಯ ದಾಲ್ಹಿಯಾ ಬ್ಯಾಂಕ್‌ ಪ್ರದೇಶದಲ್ಲಿರುವ ಲಾಂಡೋರ್‌ ಪ್ರಾಂತ್ಯದಲ್ಲಿದೆ. ಇದರ ಪಕ್ಕದಲ್ಲೇ ಕೇಂದ್ರ ಸರ್ಕಾರದ (ಡಿಆರ್‌ಡಿಒ) ಸಂಸ್ಥೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಇದೆ. ರಕ್ಷಣಾ ಇಲಾಖೆಯ ಅಧಿಕಾರಿಗಳ ಪ್ರಕಾರ, ರೆಸಾರ್ಟ್‌ ಆಡಳಿತ ಮಂಡಳಿಯು ಡಿಆರ್‌ಡಿಒ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಸೇರಿದ, ‘ನಿರ್ಮಾಣಕ್ಕೆ ಅವಕಾಶವಿಲ್ಲದ ಸ್ಥಳ (ಎನ್‌ಸಿಝಡ್‌)’ವೆಂದು ಘೋಷಿಸಲಾಗಿರುವ ಜಾಗದಲ್ಲಿ ಸುಮಾರು 50 ಅಡಿಗಳಷ್ಟುಜಾಗವನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಆರೋಪ ಮಾಡಿದ್ದಾರೆ. 

-ಕನ್ನಡ ಪ್ರಭ Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!