Top

24 ಗಂಟೆಯೊಳಗೆ ಎಫ್ಐಆರ್’ಗಳು ವೆಬ್’ಸೈಟ್’ಗಳಲ್ಲಿ ಅಪ್’ಲೋಡ್ ಆಗಬೇಕು: ಸುಪ್ರೀಂ ಕೋರ್ಟ್


Asianet News Wednesday 07 September 2016 07:19 pm IST India
24 ಗಂಟೆಯೊಳಗೆ ಎಫ್ಐಆರ್’ಗಳು ವೆಬ್’ಸೈಟ್’ಗಳಲ್ಲಿ ಅಪ್’ಲೋಡ್ ಆಗಬೇಕು: ಸುಪ್ರೀಂ ಕೋರ್ಟ್
07 Sep

ನವದೆಹಲಿ (ಸೆ.07): ಪೋಲಿಸ್ ಠಾಣೆಯಲ್ಲಿ ದಾಖಲಾಗುವ ಎಲ್ಲಾ ದೂರುಗಳನ್ನು 24 ಗಂಟೆಯೊಳಗೆ ವೆಬ್’ಸೈಟ್’ಗಳಲ್ಲಿ ಅಪ್’ಲೋಡ್ ಮಾಡುವಂತೆ ಸುಪ್ರೀಂ ಕೋರ್ಟ್ ಇಂದು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಆದರೆ ಇಂಟರ್ನೆಟ್ ಲಭ್ಯತೆ ದುರ್ಬಲವಾಗಿರುವ ಪರ್ವತಪ್ರದೇಶದ ರಾಜ್ಯಗಳಿಗೆ ಅಪ್’ಲೋಡ್ ಅವಧಿಯನ್ನು ನ್ಯಾ. ದೀಪಕ್ ಮಿಶ್ರಾ ಹಾಗೂ ನ್ಯಾ. ನಾಗಪ್ಪನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು 72 ಗಂಟೆಗಳವೆರೆಗೆ ವಿಸ್ತರಿಸಿದೆ.

ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಂತಹ ಸೂಕ್ಷ್ಮ ಪ್ರಕರಣಗಳಿಗೆ ಸುಪ್ರೀಂ ಕೋರ್ಟ್ ವಿನಾಯಿತಿ ನೀಡಿದೆ. ಯೂತ್ ಲಾಯರ್ಸ್ ಎಸೋಸಿಯೇಶನ್ ಆಫ್ ಇಂಡಿಯಾ ಸಂಸ್ಥೆಯು ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!