08
Sep
ಅಮೃತ್'ಸರ(ಸೆ.8): ಭಾರತ ಗಡಿ ರಕ್ಷಣಾ ಪಡೆಯ(ಬಿಎಸ್'ಎಫ್) ಯೋಧರು ಇಂಡೋ-ಪಾಕ್ ಗಡಿಯಲ್ಲಿ 25 ಕೆ.ಜಿ. ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಕಳೆದ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಗಡಿ ಪ್ರದೇಶದಲ್ಲಿ ಸಂಶಯಾಸ್ಪದವಾದ ಚಟುವಟಿಕೆ ಕಂಡು ಬಂದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರೌವೃತ್ತರಾದ ಸೇನಾಪಡೆ 25 ಕೆ.ಜಿ. ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್'ಎಫ್ ಡಿಐಜಿ ಆರ್'ಎಸ್ ಕಠಾರಿಯಾ ತಿಳಿಸಿದ್ದಾರೆ.
ಇದೇ ವೇಳೆ ಒಂದು ಪಿಸ್ತೂಲ್, ಆರು ಸಜೀವ ಗುಂಡುಗಳನ್ನು ಹಾಗೂ ಒಂದು ಮೊಬೈಲ್ ಜೊತೆಗೆ ಎರಡು ಪಾಕಿಸ್ತಾನಿ ಸಿಮ್'ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಐಜಿ ತಿಳಿಸಿದ್ದಾರೆ. ಆದರೆ ದಂಧೆಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Tags: