Top

ಸರ್ಕಾರದ ವಿರುದ್ಧ ಟೀಕೆ-ಟಿಪ್ಪಣಿ ಮಾಡುವವರ ವಿರುದ್ಧ ದೇಶದ್ರೋಹ ಅಥವಾ ಮಾನನಷ್ಟ ಮೊಕದ್ದಮೆ ದಾಖಲಿಸುವಂತಿಲ್ಲ - ಸುಪ್ರೀಂಕೋರ್ಟ್


Asianet News Wednesday 07 September 2016 03:15 pm IST India
ಸರ್ಕಾರದ ವಿರುದ್ಧ ಟೀಕೆ-ಟಿಪ್ಪಣಿ ಮಾಡುವವರ ವಿರುದ್ಧ ದೇಶದ್ರೋಹ ಅಥವಾ ಮಾನನಷ್ಟ ಮೊಕದ್ದಮೆ ದಾಖಲಿಸುವಂತಿಲ್ಲ - ಸುಪ್ರೀಂಕೋರ್ಟ್
07 Sep

ನವದೆಹಲಿ(ಸೆ.07): ಸರ್ಕಾರದ ವಿರುದ್ಧ ಟೀಕೆ-ಟಿಪ್ಪಣಿ ಮಾಡುವವರ ವಿರುದ್ಧ ದೇಶದ್ರೋಹ ಅಥವಾ ಮಾನನಷ್ಟ ಮೊಕದ್ದಮೆ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.

ಈ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ‘‘ಭಾರತೀಯ ದಂಡ ಸಂಹಿತೆ ೧೨೪(ಎ) ಪ್ರಕಾರ ದೇಶದ್ರೋಹ ಪ್ರಕರಣ ದಾಖಲಿಸಲು ೧೯೬೨ರ ಕೇದಾರ್ ನಾಥ್ ಪ್ರಕರಣದ ತೀರ್ಪಿನಲ್ಲಿ ಅನುಸರಿಸಿದಂತೆ ನಿರ್ದಿಷ್ಟ ಮಾನದಂಡಗಳಿವೆ. ಆರೋಪ ಹೊರಿಸುವಾಗ ಇದನ್ನು ಪಾಲಿಸಬೇಕೇ ವಿನಾ, ಯಾರಾದರೂ ಸರ್ಕಾರದ ವಿರುದ್ಧ ಟೀಕೆ ಮಾಡಿದಾಕ್ಷಣ ಅವರ ವಿರುದ್ಧ ರಾಷ್ಟ್ರದ್ರೋಹ, ಮಾನಹಾನಿ ಕೇಸು ದಾಖಲಿಸುವುದಲ್ಲ,’’ ಎಂದು ಅಭಿಪ್ರಾಯಪಟ್ಟಿತು.

ಆದರೆ, ಈ ಕುರಿತಾದ ತೀರ್ಪಿನ ಪ್ರತಿಗಳನ್ನು ಎಲ್ಲ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗಳಿಗೆ ಕಳುಹಿಸಿಕೊಡಬೇಕೆಂಬ ಅರ್ಜಿದಾರರ ಮನವಿಯನ್ನು ಕೋರ್ಟ್ ನಿರಾಕರಿಸಿತು.

ಅಲ್ಲದೆ, ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದ ಸುಪ್ರೀಂ ಮಾನದಂಡಗಳನ್ನು ಪೊಲೀಸ್ ಕಾನ್‌ಸ್ಟೇಬಲ್ ಅರ್ಥೈಸಿಕೊಳ್ಳುವ ಅಗತ್ಯವಿಲ್ಲ. ಜಿಲ್ಲಾಧಿಕಾರಿ ಅರ್ಥೈಸಿಕೊಂಡರೆ ಸಾಕು ಎಂದಿತು ಕೋರ್ಟ್. ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡುವವರನ್ನು ದೇಶದ್ರೋಹ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರ ಕಾಮನ್ ಕಾಸ್ ಎನ್‌ಜಿಒ ಕೋರ್ಟ್ ಮೆಟ್ಟಿಲೇರಿತ್ತು.

 



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!