Top

ಬುರ್ಖಾ ನಿಷೇಧಿಸಿದ ಐಸಿಸ್!


Asianet News Thursday 08 September 2016 09:09 am IST International
ಬುರ್ಖಾ ನಿಷೇಧಿಸಿದ ಐಸಿಸ್!
08 Sep

ಮೊಸುಲ್(ಸೆ.08): ಬುರ್ಖಾ ಧರಿಸಿದ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಕೊಲ್ಲುತ್ತಿದ್ದ ಕುಖ್ಯಾತ ಉಗ್ರಗಾಮಿ ಸಂಘಟನೆ ಇಸಿಸ್ ಬುರ್ಖಾಧರಿಸುವುದನ್ನೇ ನಿಷೇಧಿಸಿದೆ.

ಇರಾಕ್ ಮತ್ತು ಸಿರಿಯಾದಲ್ಲಿ ತನ್ನ ಮೂಲಭೂತವಾದಗಳಿಂದಲೇ ಕುಖ್ಯಾತಿ ಪಡೆದಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಅದರ ವಾದಗಳೇ ತಿರುಗುಬಾಣವಾಗಿ ಪರಿಣಮಿಸಲು  ಆರಂಭಿಸಿದೆ. ಈ ಹಿಂದೆ ಬುರ್ಖಾ ಧರಿಸಿಲ್ಲ ಎಂದು ಅಮಾಯಕ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಕೊಲ್ಲುತ್ತಿದ್ದ ಉಗ್ರ ಸಂಘಟನೆ ಇದೀಗ ಬುರ್ಖಾ ಧರಿಸುವುದನ್ನೇ ನಿಷೇಧಿಸಿದೆ. ಇರಾಕ್‍ನ  ಮೊಸುಲ್ ಪಟ್ಟಣದ ಐಸಿಸ್ ಭದ್ರತಾ ಕೇ೦ದ್ರಗಳಿಗೆ ಆಗಮಿಸುವ ಮಹಿಳೆಯರು ಬುರ್ಖಾ ಧರಿಸಕೂಡದು ಎ೦ದು ಉಗ್ರರು ಆದೇಶಿಸಿದ್ದಾರೆ.

ಇತ್ತೀಚೆಗೆ ಬುರ್ಖಾಧಾರಿಗಳು ಆತ್ಮಹತ್ಯಾ ದಾಳಿ ನಡೆಸಿ ಐಸಿಸ್ ಉಗ್ರರನ್ನು ಕೊಲ್ಲುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಈ ಕ್ರಮಕ್ಕೆ ಮು೦ದಾಗಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಪ್ರಾಣಕ್ಕೆ  ಧಕ್ಕೆಯಾಗಬಹುದೆ೦ಬ ಕಾರಣದಿ೦ದ, ಮೊಸುಲ್ ಪಟ್ಟಣದ ಐಸಿಸ್ ನೆಲೆಯಲ್ಲಿ ಬುರ್ಖಾ ಧರಿಸದ೦ತೆ ಜಿಹಾದಿ ಪಡೆ ಎಚ್ಚರಿಕೆ ನೀಡಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!