Top

ಪೊಲೀಸ್ ಅಧಿಕಾರಿಯ ವೀರೋಚಿತ ಸಾಹಸ


Asianet News Tuesday 30 August 2016 10:22 pm IST International
30 Aug

 

ನ್ಯೂ ಜರ್ಸಿ: ಪೊಲೀಸ್ ಅಧಿಕಾರಿಯೋರ್ವ ತನ್ನ ಜೀವದ ಹಂಗು ತೊರೆದು ಆತ್ಮಹತ್ಯೆಗೆ ಯತ್ನಿಸಿ ರೈಲ್ವೆ ಹಳಿ ಮೇಲೆ ಮಲಗಿದ್ದ ವ್ಯಕ್ತಿಯ ಪ್ರಾಣ ಕಾಪಾಡಿದ್ದಾರೆ. ರೈಲಿನಿಂದ ಕೂದಲೆಳೆ ಅಂತರದಲ್ಲಿ ಕಾಪಾಡಿದ ಸಿನಿಮೀಯ  ಘಟನೆ ನ್ಯೂ ಜರ್ಸಿಯಲ್ಲಿ ನಡೆದಿದೆ. ಪ್ರಾಣ ಉಳಿಸಿ ಹೀರೋ ಆಗಿರುವ ಪೊಲೀಸ್ ಅಧಿಕಾರಿ ವಿಕ್ಟೋರ್ ಒರ್ಟಿಜ್‌ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆತ್ಮಹತ್ಯೆಗೆ ಯತ್ನಿಸಿ ರೈಲಿನ ಹಳಿ ಮೇಲೆ ಮಲಗಿದ್ದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿ ಹೊರ ಎಳೆದ ತಕ್ಷಣವೇ ವೇಗವಾಗಿ ರೈಲು ಪಾಸ್ ಆಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.ಒಂದು ಕ್ಷಣ ವಿಳಂಬವಾಗಿದ್ದರೂ ಕೂಡ ರೈಲು ಹಳಿ ಮೇಲೆ ಮಲಗಿದ್ದ ವ್ಯಕ್ತಿ ಸಾಯುತ್ತಿದ್ದ.

 

 



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!