Top

ಬುಲೆಟ್ ಪ್ರೂಫ್ ಜಾಕೆಟ್ ಬಿಚ್ಚಿಟ್ಟು ಅನಾಥ ಮಗುವನ್ನ ರಕ್ಷಿಸಿದ ಲೇಡಿ ಪೊಲೀಸ್


Asianet News Sunday 04 September 2016 11:11 am IST International
ಬುಲೆಟ್ ಪ್ರೂಫ್ ಜಾಕೆಟ್ ಬಿಚ್ಚಿಟ್ಟು ಅನಾಥ ಮಗುವನ್ನ ರಕ್ಷಿಸಿದ ಲೇಡಿ ಪೊಲೀಸ್
04 Sep

ಬರ್ಮಿಂಗ್ ಹ್ಯಾಮ್(ಸೆ.04): ಪೊಲೀಸರಲ್ಲೂ ಅಂತಃಕರಣ, ವಾತ್ಸಲ್ಯವಿರುತ್ತದೆ ಎಂಬುದಕ್ಕೆ ಬರ್ಮಿಂಗ್ ಹ್ಯಾಮ್`ನಲ್ಲಿ ನಡೆದ ಈ ಘಟನೆ ಅತ್ಯುತ್ತಮ ಉದಾಹರಣೆಯಾಗಿದೆ. ಅಪ್ಪ-ಅಮ್ಮನನ್ನ ಕಳೆದುಕೊಂಡು ಅನಾಥವಾಗಿದ್ದ ಮಕ್ಕಳ ರಕ್ಷಣೆಗೆ ಲೇಡಿ ಪೊಲೀಸ್ ಆಫೀಸರ್ ಮಾಡಿರುವ ಈ ಕೆಲಸ ನಿಜಕ್ಕೂ ಪ್ರಶಂಸನೀಯವಾಗಿದೆ.

ಬರ್ಮಿಂಗ್ ಹ್ಯಾಮ್`ನ ಪೊಲೀಸ್ ಅಧಿಕಾರಿ ಮಿಶೆಲ್ ಬರ್ಟನ್, ಅಲಬಾಮದ ಅಪಾರ್ಟ್`ಮೆಂಟ್`ಗೆ ಬಂದಾಗ ಅಕ್ಷರಶಃ ಬೆಚ್ಚಿಬೀಳಿಸುವ ವಾತಾವರಣವಿತ್ತು. ಮೂಲೆಯಲ್ಲಿ ವ್ಯಕ್ತಿಯೊಬ್ಬ ಸತ್ತು ಬಿದ್ದಿದ್ದ. ಮತ್ತೊಂದೆಡೆ, ಮಹಿಳೆಯೊಬ್ಬರು ಪ್ರಜ್ಞಾಹೀನರಾಗಿದ್ದರು. ಡ್ರಗ್ಸ್ ಓವರ್ ಡೋಸ್ ಆಗಿ ಬಿದ್ದಿರುವುದು ಸ್ಪಷ್ಟವಾಗುತ್ತಿತ್ತು.

ಆದರೆ, ಇದರ ಮಧ್ಯೆ ಕೇಳಿಬಂದದ್ದು 7 ವರ್ಷದ ಹೆಣ್ಣುಮಗುವಿನ ಆರ್ತನಾದ ಮತ್ತು ಅದರ ಜೊತೆಗಿದ್ದ ಮೂರು ವರ್ಷ, ಎರಡು ವರ್ಷ ಮತ್ತು ಒಂದು ವರ್ಷದ ಮೂರು ಪುಟ್ಟ ಕಂದಮ್ಮಗಳ ಭಯಗ್ರಸ್ಥ ಮುಖ. ಈ ಸಂದರ್ಬ ಲೇಡಿ ಆಫೀಸರ್ ಬಳಿಗೆ ಬಂದ ಮಗು, ಅಪ್ಪ-ಅಮ್ಮ ಏಳುತ್ತಿಲ್ಲ ಎಂದು ಗದ್ಗದಿತಳಾಗಿ ನುಡಿದಿದ್ದಳು. ಈ ಸನ್ನಿವೇಶದಲ್ಲಿ ಲೇಡಿ ಪೊಲೀಸ್ ಆಫೀಸರ್ ಮಿಶೆಲ್`ಗೆ ತಾಯ್ತನದ ಅರಿವಾಗಿತ್ತು.

ಡೈಪರ್ ಸೇರಿದಂತೆ ಮಕ್ಕಳಿಗೆ ಬೇಕಾದ ತಿಂಡಿ ಎಲ್ಲವನ್ನ ತರಿಸಿದ ಮಿಶೆಲ್ ಪೋಷಣೆಗೆ ನಿಂತರು. ಜೊತೆಗೆ ಪಕ್ಕದ ಮನೆಯ ಇಬ್ಬರು ಮಕ್ಕಳನ್ನೂ ಕರೆತಂದು ಅವರ ಜೊತೆ ಆಡಲು ಬಿಟ್ಟರು. ಒಂದು ವರ್ಷದ ಮಗುವನ್ನ ಎತ್ತಿಕೊಂಡ ಮಿಶೆಲ್ ಬುಕೆಟ್ ಪ್ರೋಫ್ ಜಾಕೆಟ್ ತೆಗೆದಿರಿಸಿ ಮಗುವಿಗೆ ಹಾಲುಣಿಸಿದರು.

ಈ ಸಂದರ್ಭ ಜೊತೆಗಿದ್ದ ಇತರೆ ಪೊಲೀಸ್ ಅಧಿಕಾರಿಗಳು ಫೋಟೋವನ್ನ ಕ್ಲಿಕ್ ಮಾಡಿ ಫೇಸ್ಬುಕ್`ಗೆ ಹಾಕಿದ್ದಾರೆ. ಲೇಡಿ ಪೊಲೀಸ್ ಅಧಿಕಾರಿಯ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!