Top

ವಿಂಡೀಸ್‌ ಸವಾಲು ಹೆಚ್ಚಿಸಿದ ಅಶ್ವಿನ್‌ ಶತಕ


Asianet News Saturday 23 July 2016 09:21 pm IST Cricket
ವಿಂಡೀಸ್‌ ಸವಾಲು ಹೆಚ್ಚಿಸಿದ ಅಶ್ವಿನ್‌ ಶತಕ
23 Jul

ಆ್ಯಂಟಿಗುವಾ (ಜುಲೈ 23): ನಾಯಕ ವಿರಾಟ್‌ ಕೊಹ್ಲಿ (200: 283 ಎಸೆತ, 24 ಬೌಂಡರಿ) ದಾಖಲಿಸಿದ ಚೊಚ್ಚಲ ದ್ವಿಶತಕದೊಂದಿಗೆ ಆಲ್ರೌಂಡರ್‌ಗಳಾದ ಆರ್‌. ಅಶ್ವಿನ್‌ (113: 253 ಎಸೆತ, 12 ಬೌಂಡರಿ), ಅಮಿತ್‌ ಮಿಶ್ರಾ (53: 68 ಎಸೆತ, 6 ಬೌಂಡರಿ) ಅವರ ಬ್ಯಾಟಿಂಗ್‌ ಪ್ರದರ್ಶನವು ಆತಿಥೇಯ ವೆಸ್ಟ್‌ಇಂಡೀಸ್‌ನ ಸಂಕಷ್ಟವನ್ನು ಹೆಚ್ಚಿಸಿದೆ.

ಇಲ್ಲಿನ ಸರ್‌ ವಿವಿಯನ್‌ ರಿಚರ್ಡ್ಸ್ ಮೈದಾನದಲ್ಲಿ ಗುರುವಾರ ಆರಂಭವಾದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಪೂರ್ಣ ಪ್ರಮಾಣದ ಪ್ರಾಬಲ್ಯ ಮೆರೆದಿದೆ. ಆರಂಭಿಕ ದಿನದಂದೇ ಪ್ರಭುತ್ವ ಮೆರೆದು ದಿನಾಂತ್ಯಕ್ಕೆ ಕೇವಲ 4 ವಿಕೆಟ್‌ಗೆ 304 ರನ್‌ ಪೇರಿಸಿದ್ದ ಕೊಹ್ಲಿ ಪಡೆ, ಎರಡನೇ ದಿನದಾಟದಂದು ಆಟ ಮುಂದುವರೆಸಿ 161.5 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 566 ರನ್‌ ಗಳಿಸಿ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

ಉತ್ತರವಾಗಿ ವೆಸ್ಟ್‌ಇಂಡೀಸ್‌ 16 ಓವರ್‌ಗಳಲ್ಲಿ 1 ವಿಕೆಟ್‌ಗೆ 31 ರನ್‌ ಮಾಡಿತ್ತು. ಆರಂಭಿಕ ರಾಜೇಂದ್ರ ಚಂದ್ರಿಕಾ (16) ವೇಗಿ ಮೊಹಮದ್‌ ಶಮಿ ಬೌಲಿಂಗ್‌ನಲ್ಲಿ ವೃದ್ಧಿಮಾನ್‌ ಸಾಹಗೆ ಕ್ಯಾಚಿತ್ತು ಪೆಲಿಯನ್‌ ಸೇರಿಕೊಂಡರು. ಎರಡನೇ ದಿನದಾಟ ನಿಂತಾಗ ಕ್ರೆಗ್‌ ಬ್ರಾಥ್‌ವೈಟ್‌ (11) ಹಾಗೂ ದೇವೇಂದ್ರ ಬಿಶೂ (0) ಕ್ರೀಸ್‌ನಲ್ಲಿದ್ದರು. ಇನ್ನೂ 535 ರನ್‌ಗಳ ಹಿನ್ನಡೆಯಲ್ಲಿರುವ ವೆಸ್ಟ್‌ಇಂಡೀಸ್‌ ಮುಂದೆ ಕಠಿಣ ಸವಾಲು ಎದುರಾಗಿದೆ.

ಅಶ್ವಿನ್‌ ಮೂರನೇ ಶತಕ

ಎರಡನೇ ದಿನದಾಟದಂದು ಕೊಹ್ಲಿಯೊಂದಿಗೆ ಅದ್ಭುತ ಜತೆಯಾಟವಾಡಿದ ಆರ್‌. ಅಶ್ವಿನ್‌, ದ್ವಿಶತಕದ ನಂತರ ಕೊಹ್ಲಿ ನಿರ್ಗಮಿಸಿದ ನಂತರವೂ ವಿಚಲಿತವಾಗದೆ ಮಿಂಚಿನ ಬ್ಯಾಟಿಂಗ್‌ ಪ್ರದರ್ಶಿಸಿದರು. ವಿಂಡೀಸ್‌ ಬೌಲರ್‌ಗಳು ಅವರನ್ನು ಔಟ್‌ ಮಾಡಲು ಏನೆಲ್ಲಾ ಪ್ರಯತ್ನ ಪಟ್ಟರೂ, ಅದು ವಿಫಲವಾಯಿತು. ಬದಲಿಗೆ, ಟೆಸ್ಟ್‌ ಬದುಕಿನ ಮೂರನೇ ಶತಕ ಬಾರಿಸಿದ ಅಶ್ವಿನ್‌, ಕೆಳ ಕ್ರಮಾಂಕದಲ್ಲಿ ಮಾತ್ರವಲ್ಲ, ಮಧ್ಯಮ ಕ್ರಮಾಂಕದಲ್ಲಿ ಕೂಡ ತಂಡವನ್ನು ಆದರಿಸಬಲ್ಲೆ ಎಂಬುದನ್ನು ಸಾಬೀತುಮಾಡಿದರು. ಕೊಹ್ಲಿಯೊಂದಿಗೆ 5ನೇ ವಿಕೆಟ್‌ಗೆ 168 ರನ್‌ ಜತೆಯಾಟ ನೀಡಿದ್ದ ಅಶ್ವಿನ್‌ ಅಂತಿಮವಾಗಿ ಸ್ಪಿನ್ನರ್‌ ಕ್ರೆಗ್‌ ಬ್ರಾಥ್‌ವೈಟ್‌ ಬೌಲಿಂಗ್‌ನಲ್ಲಿ ಗೇಬ್ರಿಯಲ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿಕೊಂಡರು.

ಸಾಹ-ಅಶ್ವಿನ್‌ ಜುಗಲ್‌ಬಂದಿ

ಕೊಹ್ಲಿ ಹಾಗೂ ಅಶ್ವಿನ್‌ ನಿರ್ಗಮಿಸಿದ ನಂತರವೂ ಆತಿಥೇಯರ ಬವಣೆ ತೀರಲಿಲ್ಲ. ವಿಕೆಟ್‌ಕೀಪರ್‌ ಹಾಗೂ ಬ್ಯಾಟ್ಸ್‌ಮನ್‌ ವೃಧಿಮಾನ್‌ ಸಾಹ ಮತ್ತು ಲೆಗ್‌ಸ್ಪಿನ್ನರ್‌ ಅಮಿತ್‌ ಮಿಶ್ರಾ ಕೆಳ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಈ ಜೋಡಿಯಿಂದ ವ್ಯಕ್ತವಾದ ದಿಟ್ಟಬ್ಯಾಟಿಂಗ್‌ನಿಂದಾಗಿ ತಂಡ 550ರ ಗಡಿ ದಾಟಿತು. ಸಾಹ ಕೇವಲ 10 ರನ್‌ಗಳಿಂದ ಅರ್ಧಶತಕದಿಂದ ವಂಚಿತವಾದರೆ, 68 ಎಸೆತಗಳಲ್ಲಿ ಆರು ಆಕರ್ಷಕ ಬೌಂಡರಿಗಳುಳ್ಳ 53 ರನ್‌ ಗಳಿಸಿದ ಅಮಿತ್‌ ಮಿಶ್ರಾ ಆಕರ್ಷಕ ಅರ್ಧಶತಕ ಪೂರೈಸಿದರು.

ವಿಂಡೀಸ್‌ ಪರ ಸ್ಪಿನ್ನರ್‌ಗಳಾದ ದೇವೇಂದ್ರ ಬಿಶೂ ಮತ್ತು ಕ್ರೆಗ್‌ ಬ್ರಾಥ್‌ವೈಟ್‌ ತಲಾ 3 ವಿಕೆಟ್‌ ಗಳಿಸಿದರೆ, ವೇಗಿ ಶನೋನ್‌ ಗೇಬ್ರಿಯಲ್‌ 2 ವಿಕೆಟ್‌ ಪಡೆದರು.

ಸ್ಕೋರ್‌ ವಿವರ

ಭಾರತ ಮೊದಲ ಇನ್ನಿಂಗ್ಸ್‌

161.5 ಓವರ್‌ಗಳಲ್ಲಿ 8 ವಿಕೆಟ್‌ಗೆ 566

ಮುರಳಿ ವಿಜಯ್‌ ಸಿ ಬ್ರಾಥ್‌ವೈಟ್‌ ಬಿ ಗೇಬ್ರಿಯಲ್‌ 07

ಶಿಖರ್‌ ಧವನ್‌ ಎಲ್‌ಬಿ ಬಿ ದೇವೇಂದ್ರ ಬಿಶೂ 84

ಚೇತೇಶ್ವರ ಪೂಜಾರ ಸಿ ಬ್ರಾಥ್‌ವೈಟ್‌ ಬಿ ಬಿಶೂ 16

ವಿರಾಟ್‌ ಕೊಹ್ಲಿ ಬಿ ಗೇಬ್ರಿಯಲ್‌ 200

ಅಜಿಂಕ್ಯ ರಹಾನೆ ಸಿ ಬ್ರಾವೊ ಬಿ ಬಿಶೂ 22

ಆರ್‌. ಅಶ್ವಿನ್‌ ಸಿ ಗೇಬ್ರಿಯಲ್‌ ಬಿ ಬ್ರಾಥ್‌ವೈಟ್‌ 113

ವೃಧಿಮಾನ್‌ ಸಾಹ ಸ್ಟಂಪ್‌್ಡ ಡೌರಿಚ್‌ ಬಿ ಬ್ರಾಥ್‌ವೈಟ್‌ 40

ಅಮಿತ್‌ ಮಿಶ್ರಾ ಸಿ ಹೋಲ್ಡರ್‌ ಬಿ ಬ್ರಾಥ್‌ವೈಟ್‌ 53

ಮೊಹಮದ್‌ ಶಮಿ ಅಜೇಯ 17

ಇತರೆ: (ಬೈ-6, ಲೆಬೈ-2, ನೋಬಾಲ್‌-6) 14

ವಿಕೆಟ್‌ಪತನ: 1-14 (ವಿಜಯ್‌), 2-74 (ಪೂಜಾರ), 3-179 (ಧವನ್‌), 4-236 (ರಹಾನೆ), 5-404 (ಕೊಹ್ಲಿ), 6-475 (ಸಾಹ), 7-526 (ಅಶ್ವಿನ್‌), 8-566 (ಮಿಶ್ರಾ)

ಬೌಲಿಂಗ್‌ ವಿವರ

ಶನೋನ್‌ ಗೇಬ್ರಿಯಲ್‌ 21-5-65-2

ಜೇಸನ್‌ ಹೋಲ್ಡರ್‌ 24-4-83-0

ಕಾರ್ಲೋಸ್‌ ಬ್ರಾಥ್‌ವೈಟ್‌ 25-5-80-0

ರೊಸ್ಟನ್‌ ಚೇಸ್‌ 34-3-102-0

ದೇವೇಂದ್ರ ಬಿಶೂ 43-1-163-3

ಕ್ರೆಗ್‌ ಬ್ರಾಥ್‌ವೈಟ್‌ 14.5-1-65-3

ವೆಸ್ಟ್‌ಇಂಡೀಸ್‌ ಮೊದಲ ಇನ್ನಿಂಗ್ಸ್‌

24.2 ಓವರ್‌ಗಳಲ್ಲಿ 1 ವಿಕೆಟ್‌ಗೆ 50

(3ನೇ ದಿನದಾಟ ಭೋಜನ ವಿರಾಮಕ್ಕೆ)

ಕ್ರೆಗ್‌ ಬ್ರಾಥ್‌ವೈಟ್‌ ಔಟಾಗದೆ 27

ರಾಜೇಂದ್ರ ಚಂದ್ರಿಕಾ ಸಿ ಸಾಹ ಬಿ ಶಮಿ 16

ದೇವೇಂದ್ರ ಬಿಶೂ ಔಟಾಗದೆ 04

ಇತರೆ: (ಲೆಬೈ-1, ವೈಡ್‌-1, ನೋಬಾಲ್‌-2) 04

ವಿಕೆಟ್‌ಪತನ: 1-30 (ಚಂದ್ರಿಕಾ)

ಬೌಲಿಂಗ್‌ ವಿವರ

ಇಶಾಂತ್‌ ಶರ್ಮಾ 6-3-12-0

ಉಮೇಶ್‌ ಯಾದವ್‌ 4-3-5-0

ಮೊಹಮದ್‌ ಶಮಿ 3-0-6-1

ಆರ್‌. ಅಶ್ವಿನ್‌ 3-1-7-0Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!