Top

ಏಕದಿನ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಹೊಸ ದಾಖಲೆ: ಅಬ್ಬರಿಸಿದ ಮಾರ್ಗನ್-ಬಟ್ಲರ್


Asianet News Wednesday 31 August 2016 01:13 pm IST Cricket
ಏಕದಿನ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಹೊಸ ದಾಖಲೆ: ಅಬ್ಬರಿಸಿದ ಮಾರ್ಗನ್-ಬಟ್ಲರ್
31 Aug

ಏಕದಿನ ಕ್ರಿಕೆಟ್​'ನಲ್ಲಿ ಇಂಗ್ಲೆಂಡ್​ ಹೊಸ ದಾಖಲೆ ಬರೆದಿದೆ. ಆರಂಭಿಕ ಅಲೆಕ್ಸ್​ ಹೇಲ್ಸ್ ಅವರ ಅಬ್ಬರದಿಂದಾಗಿ ಇಂಗ್ಲೆಂಡ್​, ಪಾಕಿಸ್ತಾನ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್​ ನಷ್ಟಕ್ಕೆ 444 ರನ್​ ಗಳಿಸುವ ಮೂಲಕ ಏಕದಿನ ಕ್ರಿಕೆಟ್​'ನಲ್ಲಿ ಗರಿಷ್ಠ ರನ್​ ದಾಖಲಿಸಿದ ಸಾಧನೆ ಮಾಡಿತು.

ನಾಟಿಂಗ್​ ಹ್ಯಾಮ್​ನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಅಲೆಕ್ಸ್​ ಹೇಲ್ಸ್​ ಅಬ್ಬರದ 171 ರನ್​ಗಳಿಸುವ ಮೂಲಕ ಇಂಗ್ಲೆಂಡ್​ ಪರ ಏಕದಿನ ಕ್ರಿಕೆಟ್'​ನಲ್ಲಿ ಅತಿಹೆಚ್ಚು ವೈಯಕ್ತಿಕ ರನ್​ಗಳಿಸಿದ ದಾಖಲೆ ಬರೆದ್ರು. ಜೋ ರೂಟ್​ 85 ರನ್, ಜೋಸ್​ ಬಟ್ಲರ್​ ಅಜೇಯ 90 ರನ್, ಮತ್ತು  ಇಯಾನ್ ಮಾರ್ಗನ್​ ಅಜೇಯ 57 ರನ್​ಗಳಿಂದಾಗಿ ಇಂಗ್ಲೆಂಡ್​ 3 ವಿಕೆಟ್​ ನಷ್ಟಕ್ಕೆ 444 ರನ್​ಗಳಿಸಲು ಕಾರಣರಾದರು.

10 ವರ್ಷಗಳ ಹಿಂದೆ ಶ್ರೀಲಂಕಾ ನೆದರ್​ಲ್ಯಾಂಡ್​ ವಿರುದ್ಧ 9 ವಿಕೆಟ್​ ನಷ್ಟಕ್ಕೆ 443 ರನ್​ಗಳಿಸಿದ್ದ ವಿಶ್ವದಾಖಲೆಯನ್ನು ಪುಡಿಪುಡಿ ಮಾಡ್ತು. ಬೃಹತ್​ ಗುರಿ ಬೆನ್ನತ್ತಿದ ಪಾಕ್​ 42.4 ಓವರ್'​ನಲ್ಲಿ  275 ರನ್​ಗೆ ಆಲೌಟ್​ ಆಯ್ತು. ಈ ಮೂಲಕ ಪಾಕ್​ 169 ರನ್​ಗಳಿಂದ ಸೋಲು ಅನುಭವಿಸಿತು. ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 3-0ಯಿಂದ ಜಯ ದಾಖಲಿಸುವ ಮೂಲಕ ಇಂಗ್ಲೆಂಡ್​ ಸರಣಿ ತನ್ನದಾಗಿಸಿಕೊಂಡಿತು. ಉತ್ತಮ ಆಟವಾಡಿದ ಅಲೆಕ್ಸ್ ಹೇಲ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

 Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!