Top

ವಿಂಡೀಸ್ ವಿರುದ್ಧ 2-0 ಯಿಂದ ಟೆಸ್ಟ್ ಸರಣಿ ಗೆದ್ದ ಭಾರತ


Asianet News Sunday 14 August 2016 09:09 am IST Cricket
ವಿಂಡೀಸ್ ವಿರುದ್ಧ 2-0 ಯಿಂದ ಟೆಸ್ಟ್ ಸರಣಿ ಗೆದ್ದ ಭಾರತ
14 Aug

ಸೆಂಟ್​ ಲೂಸಿಯಾ(ಆ.14): ಸೆಂಟ್​​ ಲೂಸಿಯಾದಲ್ಲಿ ನಡೆದ ಮೂರನೇ ಟೆಸ್ಟ್​ನ ಕೊನೆಯ ದಿನ  ಭಾರತ ಐತಿಹಾಸಿಕ 237 ರನ್​ಗಳ ಜಯ ದಾಖಲಿಸಿತು. ಎರಡನೇ ಇನ್ನಿಂಗ್ಸ್​'ನಲ್ಲಿ ಗೆಲ್ಲಲು 345 ರನ್​ಗಳ ಗುರಿ ಬೆನ್ನತ್ತಿದ್ದ ವಿಂಡೀಸ್​ ಭಾರತದ ಫಾಸ್ಟ್​ ಬೌಲರ್​ಗಳ ಮುಂದೆ ಮಂಕಾಗಿ ಹೋಯಿತು.

ಆರಂಭದಲ್ಲೇ ಮೊಹ್ಮದ್​ ಶಮಿ ವಿಂಡೀಸ್​'ಗೆ ಆಘಾತ ನೀಡಿದರು. ಬಳಿಕ ಇಶಾಂತ್​ ಶರ್ಮಾ, ರವಿಂದ್ರಾ ಜಡೇಜಾ ಉತ್ತಮ ಸಾಥ್​ ನೀಡುವ ಮೂಲಕ ಕೆರಿಬೀಯನ್​'ರ​ ವಿಕೆಟ್ ಪಡೆದರು. ಆರಂಭದಿಂದಲೂ ರನ್​ಗಳಿಸಲು ಪರದಾಡಿದ ವಿಂಡೀಸ್​ ಕೇವಲ 108ರನ್​ಗೆ  ಆಲೌಟ್​​ ಆಯಿತು. 237 ರನ್​ಗಳ ಭರ್ಜರಿ ಜಯ ದಾಖಲಿಸಿತು.

ವಿಂಡೀಸ್​ನಲ್ಲಿ 2 ಪಂದ್ಯ ಗೆದ್ದ ಮೊದಲ ನಾಯಕನೆಂಬ ಕೀರ್ತಿಗೆ ನಾಯಕ ವಿರಾಟ್​​ ಕೊಹ್ಲಿ ಪಾತ್ರರಾದ್ರು. ಉತ್ತಮ ಆಲ್​ರೌಂಡ್​ ಆಟ ಪ್ರದರ್ಶಿಸಿದ ಅಶ್ವಿನ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

 Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!