Top

ಬ್ರೆಂಡನ್ ಮೆಕ್ಲಮ್ ಕನಸಿನ ತಂಡದಲ್ಲಿ ಕೊಹ್ಲಿ, ಎಬಿಡಿಗೆ ಇಲ್ಲ ಸ್ಥಾನ..!


Asianet News Thursday 08 September 2016 05:17 pm IST Cricket
08 Sep

ನವದೆಹಲಿ(ಸೆ.08): ನ್ಯೂಜಿಲ್ಯಾಂಡ್'ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಲಮ್ ಸಾರ್ವಕಾಲಿಕ ಕನಸಿನ ತಂಡವನ್ನು ಪ್ರಕಟಿಸಿದ್ದಾರೆ. ಅವರ ತಂಡದಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಸಾಕಷ್ಟು ಖ್ಯಾತ ಕ್ರಿಕೆಟಿಗರೂ ಸ್ಥಾನ ಪಡೆದಿದ್ದಾರೆ.

ಕಿವಿಸ್'ನ ಮಾಜಿ ನಾಯಕ ತನ್ನ ಕನಸಿತ ತಂಡದಲ್ಲಿ ನಾಲ್ವರು ಆಸೀಸ್ ಆಟಗಾರರರಿಗೆ ಮಣೆಹಾಕಿದ್ದರೆ, ಮೂವರು ವೆಸ್ಟ್'ಇಂಡೀಸ್ ಆಟಗಾರರಿಗೆ ಸ್ಥಾನ ನೀಡಿದ್ದಾರೆ. ಇನ್ನುಳಿದಂತೆ ಇಬ್ಬರು ಕಿವೀಸ್ ಆಟಗಾರರು ಹಾಗೂ ಭಾರತ ಹಾಗೂ ದಕ್ಷಿಣ ಆಫ್ರಿಕಾದಿಂದ ತಲಾ ಒಬ್ಬೊಬ್ಬರಿಗೆ ಸ್ಥಾನ ಕಲ್ಪಿಸಿದ್ದಾರೆ.

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮೆಕ್ಲಮ್ ತಂಡದಲ್ಲಿ ಸ್ಥಾನಪಡೆದ ಏಕೈಕ ಭಾರತೀಯ ಆಟಗಾರ ಎನಿಸಿದ್ದಾರೆ. ಇನ್ನು ಮೆಕ್ಲಮ್ ಕನಸಿನ ತಂಡದ ನಾಯಕತ್ವ ಸ್ಥಾನವನ್ನು ಕೆರಿಬಿಯನ್ ಕ್ರಿಕೆಟ್ ದಿಗ್ಗಜ ವೀವ್ ರಿಚರ್ಡ್'ಸನ್'ಗೆ ನೀಡಿದ್ದಾರೆ.

ತೆಂಡೂಲ್ಕರ್ ಜೊತೆಗೆ ಬ್ರಿಯಾನ್ ಲಾರಾ, ರಿಕಿ ಪಾಟಿಂಗ್, ಜಾಕ್ ಕಾಲೀಸ್ ಕೂಡ ಸ್ಥಾನ ಪಡೆದಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಫಾರ್ಮ್'ನಲ್ಲಿರುವ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮಹೇಂದ್ರ ಸಿಂಗ್ ಧೋನಿಗೂ ಮೆಕ್ಲಮ್ ಕನಸಿನ ತಂಡದಲ್ಲಿ ಸ್ಥಾನ ಕಲ್ಲಿಸದೇ ಇರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದರ ಜೊತೆಗೆ ಡೇಲ್ ಸ್ಟೇನ್, ಮುತ್ತಯ್ಯಾ ಮುರಳಿಧರನ್, ಗ್ಲೇನ್ ಮೆಕ್'ಗ್ರಾಥ್ ಕೂಡ ಮೆಕ್ಲಮ್ ಕನಸಿನ ತಂಡದಲ್ಲಿ ಸ್ಥಾನಪಡೆಯುವಲ್ಲಿ ವಿಫಲವಾಗಿದ್ದಾರೆ. ತನ್ನ ಕನಸಿನ ತಂಡವನ್ನು ಬ್ರೆಂಡನ್ ಮೆಕ್ಲಮ್ ಯೂಟ್ಯೂಬ್'ನಲ್ಲಿ ಪ್ರಕಟಿಸಿದ್ದಾರೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!