Top

ಸೇಂಟ್ ಲೂಸಿಯಾ ಕ್ರಿಕೆಟ್ ದೇವರಿಗೆ ಅನ್ಯಾಯ: ಎರಡು T20 ವಿಶ್ವಕಪ್ ಗೆದ್ದುಕೊಟ್ಟ ನಾಯಕನಿಗೆ ಸ್ಥಾನವಿಲ್ಲ


Asianet News Wednesday 10 August 2016 11:11 am IST Cricket
ಸೇಂಟ್ ಲೂಸಿಯಾ ಕ್ರಿಕೆಟ್ ದೇವರಿಗೆ ಅನ್ಯಾಯ: ಎರಡು T20 ವಿಶ್ವಕಪ್ ಗೆದ್ದುಕೊಟ್ಟ ನಾಯಕನಿಗೆ ಸ್ಥಾನವಿಲ್ಲ
10 Aug

ಭಾರತ-ವಿಂಡೀಸ್ ನಡುವಿನ 3ನೇ ಟೆಸ್ಟ್'​ನ ಮೊದಲ ದಿನ ಸ್ಟೇಡಿಯಂ ಖಾಲಿಖಾಲಿಯಾಗಿತ್ತು. ಸೇಂಟ್ ಲೂಸಿಯಾದಲ್ಲಿ ಟೆಸ್ಟ್ ಪಂದ್ಯ ವೀಕ್ಷಿಸಲು ಯಾರೂ ಬಂದಿರಲಿಲ್ಲ. ಯಾಕೆ ಗೊತ್ತಾ..? ಅವರ ಕ್ರಿಕೆಟ್ ದೇವರಿಗೆ ಅನ್ಯಾಯವಾಗಿದೆ ಅಂತ. ಹಾಗಾದ್ರೆ ಅವರ ಕ್ರಿಕೆಟ್ ದೇವರು ಯಾರು..? ಅವರಿಗಾಗಿರುವ ಅನ್ಯಾವಾದರೂ ಏನು? ಇಲ್ಲಿದೆ ಡಿಟೇಲ್ಸ್

ಭಾರತದಲ್ಲಿ ಸಚಿನ್ ಕ್ರಿಕೆಟ್ ದೇವರು: ಸೇಂಟ್ ಲೂಸಿಯಾದಲ್ಲಿ ಸ್ಯಾಮಿ ಕ್ರಿಕೆಟ್ ಗಾಢ್

ಭಾರತೀಯರಿಗೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರು. ಹಾಗೆ ಸೇಂಟ್ ಲೂಸಿಯಾಗೆ ಡರೇನ್ ಸ್ಯಾಮಿ ಸಹ. ನಾವು ಸಚಿನ್ ಪೂಜಿಸುವ ಹಾಗೆ ಅಲ್ಲಿ ಸ್ಯಾಮಿಯನ್ನು ಪೂಜಿಸುತ್ತಾರೆ. ಯಾಕೆ ಗೊತ್ತಾ..? ವೆಸ್ಟ್ ಇಂಡೀಸ್ ತಂಡಕ್ಕೆ ನಾಯಕನಾದ ಸೇಂಟ್ ಲೂಸಿಯಾದ ಏಕೈಕ ಆಟಗಾರ ಸ್ಯಾಮಿ. ಅಷ್ಟು ಮಾತ್ರವಲ್ಲ ವಿಂಡೀಸ್​ಗೆ 2 ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. ಹೀಗಾಗಿಯೇ ಅಲ್ಲಿನ ಕ್ರಿಕೆಟ್ ಅಭಿಮಾನಿಗಳು, ಸ್ಯಾಮಿಯನ್ನ ಆರಾಧಿಸುತ್ತಾರೆ. ಈ ಸಲ ಟಿ20 ವಿಶ್ವಕಪ್ ಗೆದ್ದ ನಂತರ ಸೇಂಟ್ ಲೂಸಿಯಾಗೆ ಹೋದ ಸ್ಯಾಮಿಯನ್ನ ಅಲ್ಲಿನ ಜನ ಬರಮಾಡಿಕೊಂಡಿದ್ದನ್ನ ನೀವೇ ನೋಡಿ. ಸ್ಯಾಮಿಯನ್ನ ಅಪ್ಪಿತಬ್ಬಾಡಿದ್ರು. ನಡು ರಸ್ತೆಯಲ್ಲೇ ಸ್ಯಾಮಿ ಡ್ಯಾನ್ಸ್ ಮಾಡಿ ತಮ್ಮ ಅಭಿಮಾನಿಗಳನದನು ರಂಜಿಸಿದ್ದರು.

ಸೇಂಟ್ ಲೂಸಿಯಾ ಕ್ರಿಕೆಟ್ ದೇವರಿಗೆ ಅನ್ಯಾಯ: ರೊಚ್ಚಿಗೆದ್ದ ಸ್ಥಳೀಯ ಕ್ರಿಕೆಟ್​ ಫ್ಯಾನ್ಸ್

ಡರೇನ್ ಸ್ಯಾಮಿ ಮೂರು ಮಾದರಿ ಕ್ರಿಕೆಟ್'​ನಲ್ಲಿ ಅದ್ಭುತ ಆಟಗಾರ. ಆಲ್​ರೌಂಡ್ ಆಟದಿಂದ ದಾಖಲೆ ಬರೆದವರು. ವಿಂಡೀಸ್ ಕ್ರಿಕೆಟ್​ ಬೋರ್ಡ್​ ಜೊತೆ ಎಷ್ಟೇ ಕಿತ್ತಾಟಗಳಿದ್ದರೂ ಆಟಗಾರರನ್ನ ಒಂದುಗೂಡಿಸಿಕೊಂಡು ಎರಡು ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. ಆದರೂ ಸಂಭಾವನೆ ವಿಷ್ಯದಲ್ಲಿ ಕಿತ್ತಾಟ ಮಾತ್ರ ಮುಂದುವರೆದಿತ್ತು.

ಈ ಸಲ ವರ್ಲ್ಡ್​ಕಪ್ ಗೆದ್ದ ನಂತರ ವಿಂಡೀಸ್ ಬೋರ್ಡ್​ ವಿರುದ್ಧ ಸ್ಯಾಮಿ ವಾಗ್ದಾಳಿ ಮಾಡಿದ್ದರು. ಇದನ್ನ ಮನಸ್ಸಿನಲ್ಲಿಟ್ಟುಕೊಂಡಿದ್ದ ವಿಂಡೀಸ್ ಬೋರ್ಡ್​, ಇದೇ ತಿಂಗಳ ಕೊನೆಯಲ್ಲಿ ಭಾರತ ವಿರುದ್ಧ ನಡೆಯುವ ಎರಡು ಟಿ20 ಪಂದ್ಯಕ್ಕೆ ಸ್ಯಾಮಿಯನ್ನು ಕಿತ್ತಾಕಿ ಬ್ರಾಥ್​ವೈಟ್ ಅವರನ್ನ ನಾಯಕನಾಗಿ ನೇಮಿಸಿದೆ. ಆಟಗಾರನಾಗಿಯೂ ಸ್ಯಾಮಿಗೆ ಸ್ಥಾನ ಸಿಕ್ಕಿಲ್ಲ.

ತಮ್ಮ ಕ್ರಿಕೆಟ್ ದೇವರಿಗೆ ಅನ್ಯಾಯವಾಗಿದೆ ಎಂದು ರೊಚ್ಚಿಗೆದ್ದ ಕ್ರಿಕೆಟ್ ಫ್ಯಾನ್ಸ್, ಸೇಂಟ್ ಲೂಸಿಯಾದಲ್ಲಿ ನಡೆಯುತ್ತಿರುವ ಭಾರತ-ವಿಂಡೀಸ್ 3ನೇ ಟೆಸ್ಟ್​​ ಅನ್ನ ಬಾಯ್ಕಾಟ್ ಮಾಡಿದ್ದಾರೆ. ಪಂದ್ಯವನ್ನ ಯಾರೋಬ್ಬರೂ ವೀಕ್ಷಿಸಬಾರದು ಅಂತ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದಾರೆ. ಅಲ್ಲಿನ ಮಾದ್ಯಮಗಳಲ್ಲಿ ಇದೇ ದೊಡ್ಡ ಸುದ್ದಿ.

ಡರೇನ್ ಸ್ಯಾಮಿ ಸ್ಟೇಡಿಯಂ ಖಾಲಿ ಖಾಲಿ: ಖಾಲಿ ಕುರ್ಚಿಗಳ ಮುಂದೆ ಭಾರತ-ವಿಂಡೀಸ್ 3ನೇ ಟೆಸ್ಟ್​

ವಿಂಡೀಸ್​ಗೆ ಎರಡು ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಂತರ ಸೇಂಟ್ ಲೂಸಿಯಾ ಸ್ಟೇಡಿಯಂಗೆ ಡರೇನ್ ಸ್ಯಾಮಿ ರಾಷ್ಟ್ರೀಯ ಕ್ರೀಡಾಂಗಣ ಅಂತ ಮರುನಾಮಕರಣ ಮಾಡಲಾಯ್ತು. ಸ್ಯಾಮಿಗೆ ವಿಂಡೀಸ್​ನ ಮೂರು ಮಾದರಿ ತಂಡದಲ್ಲೂ ಸ್ಥಾನವಿಲ್ಲ. ಇದರಿಂದ ಬೇಸರಗೊಂಡಿರುವ ಲೋಕಲ್​​ ಕ್ರಿಕೆಟ್ ​ಫ್ಯಾನ್ಸ್​, ಮೊದಲ ದಿನ ಸ್ಟೇಡಿಯಂ ಕಡೆ ಮುಖ ಮಾಡಲಿಲ್ಲ. ಹೀಗಾಗಿ ಭಾರತ-ವಿಂಡೀಸ್ ಆಟಗಾರರು ಖಾಲಿ ಕುರ್ಚಿ ಎದುರು ಆಡಬೇಕಾಯ್ತು. ಸ್ಟೇಡಿಯಂನಲ್ಲಿ ಇದ್ದದ್ದು ಕೆಲವೇ ಕೆಲವು ಮಂದಿ ಮಾತ್ರ.

ಮೊದ್ಲೇ ಟೆಸ್ಟ್ ಪಂದ್ಯ ವೀಕ್ಷಿಸಲು ಸ್ಟೇಡಿಯಂಗೆ ಪ್ರೇಕ್ಷಕರು ಬರ್ತಿಲ್ಲ. ಇದರ ನಡ್ವೆ ಇಂತಹ ಘಟನೆಗಳಿಂದ ಸ್ಟೇಡಿಯಂ ಖಾಲಿ ಖಾಲಿ ಇದ್ದರೆ ಟೆಸ್ಟ್ ಪಂದ್ಯವನ್ನು ಆಡುವುದಾದರೂ ಹೇಗೆ. ಪ್ರವಾಸಿ ಭಾರತ ತಂಡಕ್ಕೆ ಸಪೋರ್ಟ್​ ಬೇಡ. ನಮ್ಮ ತಂಡಕ್ಕೆ ಸಪೋರ್ಟ್​ ಮಾಡಿ ಸ್ಫೂರ್ತಿ ತುಂಬುವವರ್ಯಾರು ಎನ್ನುವು ವಿಂಡೀಸ್ ಆಟಗಾರರ ಅಳಲು.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!