Top

ಭಾರತ ಎ ತಂಡಕ್ಕೆ ನೆರವಾದ ಕನ್ನಡಿಗ ಮನೀಶ್‌


Asianet News Thursday 08 September 2016 09:21 pm IST Cricket
ಭಾರತ ಎ ತಂಡಕ್ಕೆ ನೆರವಾದ ಕನ್ನಡಿಗ ಮನೀಶ್‌
08 Sep

ಬ್ರಿಸ್ಬೇನ್‌(ಸೆ.08): ಕರ್ನಾಟಕದ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆ ಗಳಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ‘ಎ’ ತಂಡ, ಆಸ್ಪ್ರೇಲಿಯಾ ‘ಎ’ ತಂಡದ ವಿರುದ್ಧದ ನಾಲ್ಕು ದಿನಗಳ ಅನಧಿಕೃತ ಮೊದಲ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ ದಾಖಲಿಸಿದೆ.

ಇಲ್ಲಿನ ಆಲನ್‌ ಬಾರ್ಡರ್‌ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ‘ಎ’ ತಂಡ 81.3 ಓವರ್‌ಗಳಲ್ಲಿ 230 ರನ್‌ಗಳಿಗೆ ಆಲೌಟ್‌ ಆಯಿತು. ನಂತರ ಇನಿಂಗ್ಸ್‌ ಆರಂಭಿಸಿರುವ ಆಸ್ಪ್ರೇಲಿಯಾ ‘ಎ’ ತಂಡ, ದಿನಾಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 6 ಓವರ್‌ಗಳಲ್ಲಿ 25 ರನ್‌ ಗಳಿಸಿತ್ತು. ಆರಂಭಿಕ ಆಟಗಾರರಾದ ಕ್ಯಾಮರೂನ್‌ ಬ್ಯಾಂಕ್ರಾಫ್ಟ್‌ (10), ಜೋ ಬನ್ಸ್‌ರ್‍ (12) ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಭಾರತ ‘ಎ’ ತಂಡಕ್ಕೆ ಅಗ್ರ ಕ್ರಮಾಂಕದಲ್ಲಿ ಅಖಿಲ್‌ ಹೇರ್ವಾಡ್ಕರ್‌ (34) ಮತ್ತು ಫೈಜ್‌ ಫಜಲ್‌ (48) ಮೊದಲ ವಿಕೆಟ್‌ಗೆ 74 ರನ್‌ ಜೊತೆಯಾಟ ನಿರ್ವಹಿಸಿದರು. ಆದರೆ, ಹೇರ್ವಾಡ್ಕರ್‌ ವಿಕೆಟ್‌ ಬೀಳುತ್ತಿದ್ದ ಹಾಗೆ ಭಾರತ ತಂಡದ ಅಗ್ರಮಾನ್ಯ ಆಟಗಾರರು ಪೆವಿಲಿಯನ್‌ ಹಾದಿ ಹಿಡಿದರು. 118 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡ ಭಾರತ ತಂಡ ಸಂಕಷ್ಟದಲ್ಲಿ ಸಿಲುಕಿತ್ತು. ಈ ವೇಳೆ ಜತೆಯಾದ ಮನೀಶ್‌ ಪಾಂಡೆ ಮತ್ತು ಕರುಣ್‌ ನಾಯರ್‌ ಜೋಡಿ ರನ್‌ ಗತಿಗೆ ವೇಗ ನೀಡಿತು. ಒಂದೆಡೆ ಮನೀಶ್‌ ಬಿರುಸಿನ ಬ್ಯಾಟಿಂಗ್‌ ನಡೆಸಿದರೆ, ಕರುಣ್‌ ತಾಳ್ಮೆಯ ಆಟವಾಡಿದರು. 4ನೇ ವಿಕೆಟ್‌ಗೆ ಈ ಜೋಡಿ 70 ರನ್‌ ಕಲೆಹಾಕಿತು. ಮನೀಶ್‌ (77; 76 ಎಸೆತ, 13 ಬೌಂಡರಿ, 1 ಸಿಕ್ಸರ್‌) ಅರ್ಧಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದ್ದು ಬಿಟ್ಟರೆ ಮಿಕ್ಕವರು ವಿಫಲವಾದರು. ಆಸ್ಪ್ರೇಲಿಯಾ ‘ಎ’ ಪರ ಮಾರಕ ದಾಳಿ ಸಂಘಟಿಸಿದ ಮಿಚೆಲ್‌ ಸ್ವೀಪ್ಸನ್‌ 4, ಡೇವಿಡ್‌ ಮೂಡಿ 3, ಸೈರಸ್‌ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌

ಭಾರತ ಎ ಮೊದಲ ಇನಿಂಗ್ಸ್‌: 81.3 ಓವರ್‌ಗಳಲ್ಲಿ 230

(ಮನೀಶ್‌ ಪಾಂಡೆ 77, ಫಜಲ್‌ 48, ಮಿಚೆಲ್‌ ಸ್ವೀಪ್ಸನ್‌ 78ಕ್ಕೆ 4)

ಆಸ್ಪ್ರೇಲಿಯಾ ಎ ಮೊದಲ ಇನಿಂಗ್ಸ್‌: 6 ಓವರ್‌ಗಳಲ್ಲಿ 25/0

(ಬ್ಯಾಂಕ್ರಾಫ್ಟ್‌ ಬ್ಯಾಟಿಂಗ್‌ 10, ಬನ್ಸ್‌ರ್‍ ಬ್ಯಾಟಿಂಗ್‌ 12)



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!