Top

ಭಾರತರತ್ನ ಕುರಿತಂತೆ ತೆಂಡೂಲ್ಕರ್‌ ವಿರುದ್ಧದ ಮನವಿ ತಿರಸ್ಕರಿಸಿದ ಕೋರ್ಟ್


Asianet News Tuesday 19 July 2016 09:09 am IST Cricket
ಭಾರತರತ್ನ ಕುರಿತಂತೆ ತೆಂಡೂಲ್ಕರ್‌ ವಿರುದ್ಧದ ಮನವಿ ತಿರಸ್ಕರಿಸಿದ ಕೋರ್ಟ್
19 Jul

ನವದೆಹಲಿ(ಜು.19): ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ಗೆ ನೀಡಿದ ಭಾರತ ರತ್ನ ಗೌರವ ವಾಪಸ್‌ ಪಡೆಯಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ತೆಂಡೂಲ್ಕರ್‌ ಭಾರತ ರತ್ನ ಪ್ರಶಸ್ತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ವಿ.ಕೆ.ನಸ್ವಾ ಎಂಬುವರು ಸುಪ್ರೀಂ ಮೊರೆ ಹೋಗಿದ್ದರು. ಕೆಲ ಲೇಖಕರು ಅವರನ್ನು ಭಾರತ ರತ್ನ ಎಂದು ಕರೆದಿದ್ದಾರೆ. ಇಷ್ಟುಮಾತ್ರವಲ್ಲದೆ ಕೆಲ ಸಂದರ್ಭಗಳಲ್ಲಿ ಸ್ವತಃ ತೆಂಡೂಲ್ಕರ್‌ ಭಾರತ ರತ್ನ ಎಂದು ಹೇಳಿಕೊಂಡಿದ್ದಾರೆ ಎಂದು ವಾದಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ.ದೀಪಕ್‌ ಮಿಶ್ರಾ ಮತ್ತು ನ್ಯಾ.ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ಪೀಠ ಪುಸ್ತಕ ಬರೆಯುವವರು ಸಚಿನ್‌ರನ್ನು ಭಾರತ ರತ್ನಕ್ಕೆ ಹೋಲಿಕೆ ಮಾಡಿದರೆ, ಅದಕ್ಕೆ ಸಚಿನ್‌ರನ್ನು ಜವಾಬ್ದಾರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!