Top

ಟೂ ಟಯರ್ ಟೆಸ್ಟ್ ಸದ್ಯಕ್ಕಿಲ್ಲ


Asianet News Wednesday 07 September 2016 10:22 pm IST Cricket
ಟೂ ಟಯರ್ ಟೆಸ್ಟ್ ಸದ್ಯಕ್ಕಿಲ್ಲ
07 Sep

ನವದೆಹಲಿ(ಸೆ.07) ಐದು ದಿನಗಳ ಟೆಸ್ಟ್‌ ಕ್ರಿಕೆಟ್‌ ಜನಪ್ರೇಮ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅದನ್ನು ಜನಸ್ನೇಹಿಯಾಗಿಸುವ ಉದ್ದೇಶದಿಂದ ಟೂ - ಟಯರ್‌ ಟೆಸ್ಟ್‌ ಮಾದರಿಯನ್ನು ಪರಿಚಯಿಸಲು ಮುಂದಾಗಿದ್ದ ಐಸಿಸಿ ಇದೀಗ 2019ರವರೆಗೆ ಅದರ ಗೊಡವೆಗೆ ಹೋಗುವುದಿಲ್ಲ ಎಂದಿದೆ.

ಟೂ ಟಯರ್‌ ಟೆಸ್ಟ್‌ ಮಾದರಿಯಲ್ಲಿ ಟೆಸ್ಟ್‌ ರಾರ‍ಯಂಕಿಂಗ್‌ನ ಮೊದಲ ಏಳು ಸ್ಥಾನದಲ್ಲಿರುವ ರಾಷ್ಟ್ರಗಳು ಎರಡು ದ್ವಿಪಕ್ಷೀಯ ಸರಣಿಯನ್ನು (ಒಂದು ತವರು ಹಾಗೂ ತವರಿನಾಚೆ ಇನ್ನೊಂದು) ನಾಲ್ಕು ವರ್ಷಗಳವರೆಗೆ ಆಡುವುದು. ಇವನ್ನು ಟಯರ್‌ ಒಂದರ ತಂಡಗಳೆನ್ನಲಾದರೆ, ಟಯರ್‌-2ರಲ್ಲಿ ವೆಸ್ಟ್‌ಇಂಡೀಸ್‌ (8ನೇ ಸ್ಥಾನ), ಬಾಂಗ್ಲಾದೇಶ (9), ಜಿಂಬಾಬ್ವೆ (10) ಅಲ್ಲದೆ, ಇನ್ನೆರಡು ತಂಡಗಳಿರಲಿವೆ.

ಎರಡು ವರ್ಷಗಳ ಅವಧಿಯಲ್ಲಿ ಇವು ತೋರುವ ಪ್ರದರ್ಶನದ ಮೇರೆಗೆ ಹಿಂಬಡ್ತಿ ಮತ್ತು ಮುಂಬಡ್ತಿ ನೀಡುವ ಪ್ರಕ್ರಿಯೆಯನ್ನು ಟೂ-ಟಯರ್‌ ಸಿಸ್ಟಂ ಎಂದು ಐಸಿಸಿ ಕರೆದಿತ್ತು. ಇದೇನಾದರೂ ಚಾಲ್ತಿಗೆ ಬಂದರೆ, ಆಷ್ಘಾನಿಸ್ತಾನ ಮತ್ತು ಐರ್ಲೆಂಡ್‌ನಂಥ ತಂಡಗಳು ಟೆಸ್ಟ್‌ ಕ್ರಿಕೆಟ್‌ ಆಡಲು ಅವಕಾಶ ಪಡೆಯುತ್ತದೆ ಎಂದು ಅದು ವಾದಿಸಿತ್ತು. ಆದರೆ, ಇಂಥದ್ದೊಂದು ಕ್ರಮವು ಕೆಳ ಕ್ರಮಾಂಕಿತ ಕ್ರಿಕೆಟ್‌ ರಾಷ್ಟ್ರಗಳಿಗೆ ಹಿನ್ನಡೆಯಾಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ಆತಂಕ ವ್ಯಕ್ತಪಡಿಸಿದ್ದರಲ್ಲದೆ, ಐಸಿಸಿಯ ಈ ಪ್ರಸ್ತಾವನೆಯನ್ನು ಬಲವಾಗಿ ವಿರೋಧಿಸಿದ್ದರು.

ಸಾಮಾನ್ಯವಾಗಿ ಆಟದ ಈಗಿನ ಸ್ವರೂಪದಲ್ಲೇನಾದರೂ ಬದಲಾವಣೆ ಮಾಡಬೇಕಾದರೆ, ಐಸಿಸಿಗೆ ಮೂರನೇ ಎರಡರಷ್ಟುಬೆಂಬಲ ವ್ಯಕ್ತವಾಗಬೇಕು. ಅರ್ಥಾತ್‌ 10 ಮತಗಳಿಗೆ 7 ಮತಗಳು ಐಸಿಸಿ ಪರವಾಗಿರಬೇಕು. ಆದರೆ, ಬಿಸಿಸಿಐನ ಪ್ರಾಬಲ್ಯದಿಂದಾಗಿ ಅದು ಸಾಧ್ಯವಾಗಲಿಲ್ಲ. ಅಂದಹಾಗೆ ಈ ಟೂ ಟಯರ್‌ ಟೆಸ್ಟ್‌ಗೆ ಆಸ್ಪ್ರೇಲಿಯಾ, ಇಂಗ್ಲೆಂಡ್‌, ದ.ಆಫ್ರಿಕಾ, ನ್ಯೂಜಿಲೆಂಡ್‌, ಪಾಕಿಸ್ತಾನ ಮತ್ತು ವೆಸ್ಟ್‌ಇಂಡೀಸ್‌ ಬೆಂಬಲ ವ್ಯಕ್ತಪಡಿಸಿದವು.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!