Top

ಕೊಹ್ಲಿ ನಾಯಕತ್ವದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಧೋನಿ


Asianet News Friday 19 August 2016 06:18 pm IST Cricket
ಕೊಹ್ಲಿ ನಾಯಕತ್ವದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಧೋನಿ
19 Aug

ನವದೆಹಲಿ(ಆ.19): ಟೀಮ್ ಇಂಡಿಯಾದ ನಿಗದಿತ ಓವರ್`ಗಳ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಭಾವಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಪ್ರತಿಭೆಯನ್ನ ಹಾಡಿ ಹೊಗಳಿದ್ದಾರೆ. ವಿರಾಟ್ ಕೊಹ್ಲಿ ಮೂರೂ ಮಾದರಿಯ ಕ್ರಿಕೆಟ್`ನಲ್ಲಿ ಉತ್ತಮ ನಾಯಕರಾಗಬಲ್ಲರು ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.

 `ವಿರಾಟ್ ಕೊಹ್ಲಿ ಹಲವು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಒಬ್ಬ ಆಟಗಾರ ತಾನಾಡಿದ ಮೊದಲ ಪಂದ್ಯದಿಂದ ತನ್ನ ಆಟವನ್ನ ಹೇಗೆ ಉತ್ತಮಪಡಿಸಿಕೊಳ್ಳುತ್ತಾನೆ ಎಂಬುದು ಬಹಳ ಮುಖ್ಯವಾಗುತ್ತೆ. ಕೊಹ್ಲಿ ಪ್ರತೀ ಪಂದ್ಯದಲ್ಲೂ ತನ್ನ ಆಟವನ್ನ ಸುಧಾರಿಸಿಕೊಳ್ಳುತ್ತಾರೆ. ತಂಡದ ಗೆಲುವಿಗೆ ತನ್ನದೇ ಕೊಡುಗೆ ನೀಡಲು ತವಕಿಸುತ್ತಿರುತ್ತಾರೆ. ತಂಡದ ಆಟಗಾರನಾಗಿರುತ್ತಾರೆ' ಎಂದು ಧೋನಿ ಹಾಡಿ ಹೊಗಳಿದ್ದಾರೆ.

ದೇಹದ ಫಿಟ್ನೆಸ್ ಸೇರಿದಂತೆ ಪ್ರತಿಯೊಂದರಲ್ಲೂ ಕೊಹ್ಲಿ ತನ್ನನ್ನ ತಾನು ಸುಧಾರಿಸಿಕೊಳ್ಳುತ್ತಿರುತ್ತಾರೆ. ಪಂದ್ಯದ ಗತಿ ಅರಿತು ತಮ್ಮ ಯೋಜನೆಯನ್ನ ಕಾರ್ಯಗತಗೊಳಿಸುತ್ತಾರೆ. ಈ ಗುಣಗಳೇ ಅವರನ್ನ ವಿಶೇಷವಾಗಿಸಿದೆ.

`ಮೊದಲ ಬಾರಿಗೆ ಆರ್`ಸಿಬಿ ತಂಡವನ್ನ ಲೀಡ್ ಮಾಡಿದ ಕೊಹ್ಲಿ ಕಳೆದೊಂದು ವರ್ಷದಿಂದ ಟೆಸ್ಟ್ ತಂಡದ ನಾಯಕರಾಗಿದ್ದಾರೆ. ಎಲ್ಲ ಸವಾಲುಗಳನ್ನ ಮೆಟ್ಟಿ ನಿಂತಿರುವ ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್`ನಲ್ಲಿ ಉತ್ತಮ ನಾಯಕರಾಗಲಿದ್ದಾರೆ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!