Top

ಟೀಮ್ ಇಂಡಿಯಾದಲ್ಲಿದ್ದಾನೆ ಮತ್ತೊಬ್ಬ ವಿರಾಟ್ ಕೊಹ್ಲಿ


Asianet News Saturday 03 September 2016 05:17 pm IST Cricket
ಟೀಮ್ ಇಂಡಿಯಾದಲ್ಲಿದ್ದಾನೆ ಮತ್ತೊಬ್ಬ ವಿರಾಟ್ ಕೊಹ್ಲಿ
03 Sep

ಬೆಂಗಳೂರು(ಸೆ.03): ಲೋಕೇಶ್ ರಾಹುಲ್.. ಭಾರತ ಕ್ರಿಕೆಟ್ ತಂಡದ ಮತ್ತೊಬ್ಬ ಸ್ಟಾರ್.. ವಿರಾಟ್ ಕೊಹ್ಲಿ ನಂತರ ಅದೇ ವೇಗದಲ್ಲಿ ತಂಡದಲ್ಲಿ ಮಿಂಚುತ್ತಿರುವ ಕನ್ನಡದ ಕುವರ. ಆರ್`ಸಿಬಿಯಿಂದ ಹಿಡಿದು ಕ್ಯಾಪ್ಟನ್ ಕೊಹ್ಲಿ ಸಂಗ ಸೇರಿಕೊಂಡ ರಾಹುಲ್ ಮೂರೂ ಮಾದರಿಯ ಕ್ರಿಕೆಟ್`ನಲ್ಲಿ ಅಬ್ಬರಿಸುತ್ತಿದ್ದಾರೆ.

ಕೊಟ್ಟ ಅವಕಾಶವನ್ನ ಸದುಪಯೋಗಪಡಿಸಿಕೊಂಡ ರಾಹುಲ್ ಟೀಮ್ ಇಂಡಿಯಾದಲ್ಲಿ ಬಹುತೇಕ ಖಾಯಂ ಆಟಗಾರರಾಗಿದ್ದಾರೆ. ಈ ವರ್ಷದ ರಾಹುಲ್ ಅಂಕಿ ಅಂಶ ಗಮನಿಸಿದರೆ ನಿಜಕ್ಕೂ ರಾಹುಲ್ ಪ್ರತಿಭೆಯ ದರ್ಶನವಾಗುತ್ತೆ.

ಐಪಿಎಲ್`ನಲ್ಲಿ ರಾಯಲ್ ಚಾಲೆಂಜರ್ಸ್ ಬೆಮಗಳೂರು ತಂಡದಲ್ಲಿರುವ ಕೆ.ಎಲ್. ರಾಹುಲ್ ಒಟ್ಟು 14 ಪಂದ್ಯಗಳನ್ನಾಡಿ 44.11ರ ಸರಾಸರಿಯಲ್ಲಿ ಬರೋಬ್ಬರಿ 397 ರನ್ ಚಚ್ಚಿದ್ದಾರೆ. 4 ಅರ್ಧಶತಕಗಳ ಜೊತೆ ಆರ್`ಸಿಬಿ 3ನೇ ಅತ್ಯಧಿಕ ರನ್ ಗಳಿಸಿದ ಆಟಗಾರ ೆಂಬ ಖ್ಯಾತಿ ಗಳಿಸಿದ್ದರು.

ರಾಹುಲ್ ಆಟದ ಬಗ್ಗೆ ಬಹಳ ನಂಬಿಕೆ ಇಟ್ಟಿರುವ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ತಂಡಕ್ಕೂ ಸೇರಿಸಿಕೊಂಡರು. ಕಳೆದ ತಿಂಗಳ ಜಿಂಬಾಬ್ವೆ ಪ್ರವಾಸದಲ್ಲಿ ರಾಹುಲ್ 3 ಏಕದಿನ ಪಂದ್ಯಗಳಲಲ್ಇ 196 ರನ್ ಚಚ್ಚಿದ್ದಾರೆ. ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಸೆಂಚುರಿ ಚಚ್ಚಿದ ಖ್ಯಾತಿಗೆ ರಾಹುಲ್ ಪಾತ್ರರಾಗಿದ್ದಾರೆ.

 ಇನ್ನೂ ಟೆಸ್ಟ್ ಪಂದ್ಯದಲ್ಲೂ ರಾಹುಲ್ ಕಡಿಮೆ ಇಲ್ಲ. ಮೆಲ್ಬೋರ್ನ್`ನಲ್ಲಿ ಆಸೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್`ಗೆ ಪಾದಾರ್ಪಣೆ ಮಾಡಿದ ರಾಹುಲ್ ಸಿಡ್ನಿಯಲ್ಲಿ ಶತಕ ಸಿಡಿಸಿ ನಾಯಕನ ನಂಬಿಕೆ ಗಿಟ್ಟಿಸಿಕೊಂಡರು. ಕೊಲಂಬೋದಲ್ಲಿ ಲಂಕಾ ವಿರುದ್ಧ 2ನೇ ಟೆಸ್ಟ್`ನಲ್ಲಿ ಶತಕ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟರು. ಮುರಳಿ ವಿಜಯ್ ಮತ್ತು ಶಿಖರ್ ಧವನ್ ಬದಲಿಗೆ ಆರಂಭಿಕ ಖಾಯಂ ಆಟಗಾರರಾದರು.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!