Top

ಟೆಸ್ಟ್`ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಕೊಹ್ಲಿ, ಬೃಹತ್ ಮೊತ್ತದತ್ತ ಭಾರತ


Asianet News Friday 22 July 2016 09:21 pm IST Cricket
ಟೆಸ್ಟ್`ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಕೊಹ್ಲಿ, ಬೃಹತ್ ಮೊತ್ತದತ್ತ ಭಾರತ
22 Jul

ಅಂಟಿಗುವಾ(ಜು.22): ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲೇ ನಾಯಕ ವಿರಾಟ್ ಕೊಹ್ಲಿ ಅಬ್ಬರಿಸಿದ್ದಾರೆ. ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದಾರೆ. ಕೇವಲ 281ಎಸೆತಗಳಲ್ಲಿ ದ್ವಿಶತಕ ಸಿಡಿಸಿರುವ ವಿರಾಟ್ ಕೊಹ್ಲಿ, 24 ಬೌಂಡರಿಗಳನ್ನ ಚಚ್ಚಿದ್ದಾರೆ. ವೆಸ್ಟ್ ಇಂಡೀಸ್`ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಭಾರತದ ನಾಯಕ ಎಂಬ ಖ್ಯಾತಿಗೂ ಕೊಹ್ಲಿ ಪಾತ್ರರಾಗಿದ್ದಾರೆ.

ನಿನ್ನೆ ಮೊದಲ ದಿನದಾಟದಂತ್ಯಕ್ಕೆ 143 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕೊಹ್ಲಿ, ಇಂದು ಆರಂಭದಿಂದಲೂ ಉತ್ತಮ ಆಟ ಆಡಿದರು. ಯಾವುದೇ ಹಂತದಲ್ಲೂ ವಿಂಡೀಸ್ ಬೌಲರ್`ಗಳಿಗೆ ಮೇಲುಗೈ ಸಾಧಿಸಲು ಅವಕಾಶ ಕೊಡಲಿಲ್ಲ. ಅಮೋಘ ದ್ವಿಶತಕ ಸಿಡಿಸಿ ಸಂಭ್ರಮಿಸಿದರು. ವಿರಾಟ್ ಕೊಹ್ಲಿಗೆ ನಾಯಕನಾಗಿ ಇದು ಮೊದಲ ವಿದೇಶಿ ಪ್ರವಾಸವಾಗಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

 

  



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!