Top

ಐತಿಹಾಸಿಕ ಪಂದ್ಯದಲ್ಲಿ ಭಾರತ, ಪೋರ್ಟೊರಿಕೊ


Asianet News Friday 02 September 2016 10:22 pm IST Football
ಐತಿಹಾಸಿಕ ಪಂದ್ಯದಲ್ಲಿ ಭಾರತ, ಪೋರ್ಟೊರಿಕೊ
02 Sep

ಮುಂಬೈ(ಸೆ.2): ವಿಶ್ವ ಶ್ರೇಯಾಂಕ ಪಟ್ಟಿ​ಯಲ್ಲಿ ಮೇಲ​ಕ್ಕೇ​ರಲು ತವ​ಕಿ​ಸು​ತ್ತಿ​ರುವ ಭಾರತ ಫುಟ್ಬಾಲ್‌ ತಂಡವು, ಶನಿ​ವಾರ ಇಲ್ಲಿನ ಅಂಧೇರಿ ಕ್ರೀಡಾ ಸಮು​ಚ್ಛ​ಯ​ದಲ್ಲಿ ನಡೆ​ಯ​ಲಿ​ರುವ ಸ್ನೇಹ​ಪರ ಪಂದ್ಯದಲ್ಲಿ ಪೋರ್ಟೊ​ರಿಕೋ ತಂಡ​ವನ್ನು ಎದು​ರಿ​ಸ​ಲಿದೆ. ಅಂತಾ​ರಾ​ಷ್ಟ್ರೀಯ ಫುಟ್ಬಾಲ್‌ ಶ್ರೇಯಾಂಕ ಪಟ್ಟಿ​ಯಲ್ಲಿ ಪೋರ್ಟೊ​ರಿಕೋ 114ನೇ ಸ್ಥಾನ​ದ​ಲ್ಲಿ​ದ್ದರೆ, ಭಾರತ 152ನೇ ಸ್ಥಾನ​ದ​ಲ್ಲಿದೆ.

ಕಳೆದ 61 ವರ್ಷ​ಗ​ಳಲ್ಲಿ ಮೊದಲ ಬಾರಿಗೆ ಇಲ್ಲಿ ನಡೆ​ಯ​ಲಿ​ರುವ ಮೊಟ್ಟ​ಮೊ​ದಲ ಅಂತಾ​ರಾ​ಷ್ಟ್ರೀಯ ಪಂದ್ಯ ಇದಾ​ಗಿದ್ದು, ಈ ಹಿಂದೆ, 1955ರಲ್ಲಿ ಭಾರ​ತವು ರಷ್ಯಾ ವಿರುದ್ಧದ ಪಂದ್ಯ​ದಲ್ಲಿ ಕಣ​ಕ್ಕಿ​ಳಿ​ದಿತ್ತು. ಇದ​ಲ್ಲದೆ, ಅಮೆ​ರಿಕ ಒಕ್ಕೂ​ಟ​ದ ಹಾಗೂ ಕೆರಿ​ಬಿ​ಯನ್‌ ಫುಟ್ಬಾಲ್‌ ಸಂಸ್ಥೆ​ಯೊಂದರ (ಕಾ​ನ್‌​ಕ್ಯಾ​ಫ್‌) ಸದಸ್ಯ ತಂಡ​ವೊಂದು ಭಾರ​ತ​ಕ್ಕೆ ಆಗ​ಮಿಸುತ್ತಿ​ರು​ವುದು ಇದೇ ಮೊದಲು.

ಈ ಎಲ್ಲಾ ವಿಶೇ​ಷ​ತೆ​ಗ​ಳಿಂದ ಕೂಡಿ​ರುವ ಈ ಪಂದ್ಯ​ದಲ್ಲಿ ಪ್ರವಾ​ಸಿ​ಗ​ರನ್ನು ಮಣಿ​ಸಲು ಬೇಕಾದ ಎಲ್ಲಾ ತಂತ್ರ​ಗಾ​ರಿ​ಕೆ​ಯನ್ನು ಅಳ​ವ​ಡಿ​ಸಿ​ಕೊ​ಳ್ಳು​ತ್ತಿ​ರುವ ಭಾರತ ತಂಡದ ಕೋಚ್‌ ಸ್ಟೀಫನ್‌ ಕಾನ್‌​ಸ್ಟಾಂಟೈನ್‌, ಜೆಜೆ ಲಾಲ್‌​ಪೆ​ಖ್ಲುವಾ ನೇತೃ​ತ್ವದ ಭಾರ​ತದ ಪಡೆಯನ್ನು 4-2-3-1 ಸೂತ್ರ​ದಡಿ ಕಣ​ಕ್ಕಿ​ಳಿ​ಸಲು ನಿರ್ಧ​ರಿ​ಸಿ​ದ್ದಾರೆ.

ಗುರು​ಪ್ರೀ​ತ್‌ ಗೋಲ್‌ ಕೀಪ​ರ್‌: ತಂಡದ ಗೋಲ್‌ ಕೀಪರ್‌ ಹಾಗೂ ಇತ್ತೀ​ಚೆ​ಗಷ್ಟೇ ಅರ್ಜುನ ಪ್ರಶಸ್ತಿ ಪಡೆದು ಗಮನ ಸೆಳೆ​ದಿ​ರುವ ಸುಬ್ರತಾ ಪಾಲ್‌, ಈ ಪಂದ್ಯ​ದಲ್ಲಿ ಆಡು​ತ್ತಿ​ಲ್ಲ​ವಾ​ದ್ದ​ರಿಂದ ಅವರ ಸ್ಥಾನ​ವನ್ನು ಗುರು​ಪ್ರೀತ್‌ ಸಿಂಗ್‌ ಸಂಧು ತುಂಬ​ಲಿ​ದ್ದಾರೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!