Top

ಸೌಹಾರ್ದ ಸವಾಲು ಗೆದ್ದ ಭಾರತ


Asianet News Sunday 04 September 2016 04:16 pm IST Football
ಸೌಹಾರ್ದ ಸವಾಲು ಗೆದ್ದ ಭಾರತ
04 Sep

ನವದೆಹಲಿ(ಸೆ.04): ಪಂದ್ಯದ ಆರಂಭದಿಂದಲೂ ಶಿಸ್ತಿನ ಪ್ರದರ್ಶನ ನೀಡಿದ ಭಾರತೀಯ ಫುಟ್ಬಾಲ್ ತಂಡ, ಪೋರ್ಟರಿಕೋ ವಿರುದ್ಧದ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ 4-1 ಗೋಲುಗಳ ಅಂತರದ ಭರ್ಜರಿ ಜಯ ದಾಖಲಿಸಿತು.

ಇಲ್ಲಿನ ಫುಟ್ಬಾಲ್ ಅರೇನಾದಲ್ಲಿ ನಡೆದ ಪಂದ್ಯದ ಪಂದ್ಯದ 7ನೇ ನಿಮಿಷದಲ್ಲಿ ಭಾರತ ತಂಡದ ಜಾಕಿಚಾಂದ್ ಸಿಂಗ್ ಅವರು ಎಸಗಿದ ಫೌಲ್‌ನಿಂದಾಗಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಪೋರ್ಟರಿಕೋ ತಂಡಕ್ಕೆ ಇಮಾನುವೆಲ್ ಸ್ಯಾಂಚೇಜ್ 1-0 ಗೋಲಿನ ಮುನ್ನಡೆ ಒದಗಿಸಿಕೊಟ್ಟರಾದರೂ, ಆನಂತರ ಭಾರತದ ಪರ ನಾರಾಯಣ ದಾಸ್ (18 ನಿ.), ಸುನೀಲ್ ಛೆಟ್ರಿ (26 ನಿ.), ಲಾಲ್ ಪೆಕ್ಲುವಾ (34 ನಿ.), ಜಾಕಿಚಾನ್ ಸಿಂಗ್ (58ನೇ ನಿ.) ತಲಾ ಒಂದೊಂದು ಗೋಲು ಹೊಡೆದು ಮಿಂಚಿನ ಪ್ರದರ್ಶನ ನೀಡಿದರು.

ಸೌಹಾರ್ದ ಪಂದ್ಯವಾದರೂ ಕಳೆದ ಹತ್ತು ಪಂದ್ಯಗಳಲ್ಲಿ ಏಳು ಜಯ ಕಂಡಿದ್ದ ಭಾರತಕ್ಕೆ ಈ ಪಂದ್ಯದ ಫಲಿತಾಂಶ ಫಿಫಾ ರ‌್ಯಾಂಕಿಂಗ್ ಪಟ್ಟಿಯಲ್ಲಿ ತಾನಿದ್ದ 152ನೇ ಸ್ಥಾನಕ್ಕಿಂತ ಒಂದೆರಡು ಸ್ಥಾನಗಳ ಮೇಲ್ಪಂಕ್ತಿಗೆ ಸಾಗಲು ಅನುಕೂಲ ಮಾಡಿಕೊಡುವ ಅವಕಾಶಗಳನ್ನು ತೆರೆದಿಟ್ಟಿತ್ತು.

ಇದಲ್ಲದೆ, ಮುಂಬರುವ ದಿನಗಳಲ್ಲಿ ಕೆಲವಾರು ಮಹತ್ವದ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿರುವ ಭಾರತಕ್ಕೆ ಈ ಪಂದ್ಯದಲ್ಲಿ ಗೆದ್ದು ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕೆಂಬ ಹಂಬಲ, ತಂಡದ ಕೋಚ್ ಕಾನ್‌ಸ್ಟಾಂಟಿನ್ ಅವರದ್ದಾಗಿತ್ತು. ಸದ್ಯದ ಮಟ್ಟಿಗೆ ಅವರ ಆಸೆ ನೆರವೇರಿದೆ.

ಆದರೆ, ಪಂದ್ಯದ 17ನೇ ನಿಮಿಷದಲ್ಲಿ ಗೋಲು ದಾಖಲಿಸಿದ ನಾರಾಯಣ್ ದಾಸ್, ಭಾರತವು ಪಂದ್ಯದಲ್ಲಿ ಪ್ರವಾಸಿಗರ ವಿರುದ್ಧ ಸಮಬಲ ಸಾಧಿಸಲು ನೆರವಾದರು. ಆನಂತರ, ಪಂದ್ಯದ 28ನೇ ನಿಮಿಷದಲ್ಲಿ ಮಿಂಚಿದ ಸುನಿಲ್ ಛೆಟ್ರಿ ಅವರು ಗೋಲು ದಾಖಲಿಸುವ ಮೂಲಕ ಭಾರತಕ್ಕೆ 2-1ರ ಮುನ್ನಡೆ ತಂದುಕೊಟ್ಟರು. ಪಂದ್ಯದ ಮೊದಲಾರ್ಧ ಇದೇ ಅಂತರದಲ್ಲಿ ಮುಕ್ತಾಯವಾಯಿತು.

ಪಂದ್ಯದ ದ್ವಿತೀಯಾರ್ಧ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಲಾಲ್‌ಪೆಕ್ಲುವಾಲಿಯಾ (34ನೇ ನಿಮಿಷ) ಗೋಲು ದಾಖಲಿಸುವ ಮೂಲಕ ಆತಿಥೇಯರಿಗೆ 3-1ರ ಮುನ್ನಡೆ ಒದಗಿಸಿಕೊಟ್ಟರೆ, ಪಂದ್ಯದ ೫೮ನೇ ನಿಮಿಷದಲ್ಲಿ ಜಾಕಿಚಾಂದ್ ಸಿಂಗ್, ಯುಗೆನ್ಸನ್ ಲಿಂಗ್ಡೋ ನೀಡಿದ ಪಾಸ್ ಅನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಗೋಲು ಪೆಟ್ಟಿಗೆಯೊಳಗೆ ನುಗ್ಗಿಸುವಲ್ಲಿ ಯಶಸ್ವಿಯಾಗಿ ಭಾರತಕ್ಕೆ 4ನೇ ಗೋಲು ತಂದಿತ್ತರು. ಇದೇ ಅಂತರದಲ್ಲಿ ಪಂದ್ಯ ಮುಕ್ತಾಯವಾಗಿ ಭಾರತ ಗೆಲುವಿನ ನಗೆ ಬೀರಿತು.

 Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!