Top

ಅಕ್ಟೋಬರ್'ನಲ್ಲಿ ಐಎಸ್ಎಲ್ ಫುಟ್ಬಾಲ್ ಲೀಗ್'ಗೆ ಚಾಲನೆ


Asianet News Saturday 27 August 2016 06:18 pm IST Football
ಅಕ್ಟೋಬರ್'ನಲ್ಲಿ ಐಎಸ್ಎಲ್ ಫುಟ್ಬಾಲ್ ಲೀಗ್'ಗೆ ಚಾಲನೆ
27 Aug

ಮುಂಬೈ(ಆ.27): ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಮೂರನೇ ಆವೃತ್ತಿಯು ಅಕ್ಟೋಬರ್ 1ರಿಂದ ಆರಂಭವಾಗುತ್ತಿದ್ದು, ಡಿಸೆಂಬರ್ 18ಕ್ಕೆ ಮುಕ್ತಾಯ ಕಾಣಲಿದೆ.

ಗುವಾಹಟಿಯಲ್ಲಿ ಟೂರ್ನಿಯ ಆರಂಭಿಕ ಪಂದ್ಯ ನಡೆಯಲಿದ್ದರೆ, ಎರಡು ಹಂತದ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ಸ್ಥಳವನ್ನು ಬಳಿಕ ನಿರ್ಧರಿಸಲಾಗುವುದು ಎಂದು ಐಎಸ್‌ಎಲ್ ಸಂಘಟಕರು ತಿಳಿಸಿದ್ದಾರೆ. ಲೀಗ್‌ನ ಪ್ರಾಯೋಜಕತೆ ಪಡೆದಿರುವ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿ. ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದ್ದು, ಎಲ್ಲ ಪಂದ್ಯಗಳೂ ರಾತ್ರಿ 7 ಗಂಟೆಗೆ ಶುರುವಾಗಲಿದೆ. 79 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 61 ಪಂದ್ಯಗಳಿರಲಿವೆ ಎಂದು ಹೇಳಿದೆ.

ಬಾಲಿವುಡ್ ನಟ ಜಾನ್ ಅಬ್ರಹಾಂ ಸಹ ಮಾಲೀಕತ್ವದ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ, ಸಚಿನ್ ತೆಂಡೂಲ್ಕರ್ ಮಾಲೀಕತ್ವದ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ತಂಡವನ್ನು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಮೊದಲ ಹಂತದ ಸೆಮಿಫೈನಲ್ ಡಿಸೆಂಬರ್ 10, 11ರಂದು ನಡೆಯಲಿದ್ದರೆ, ಎರಡನೇ ಹಂತದ ಸೆಮಿಫೈನಲ್ ಡಿಸೆಂಬರ್ 13 ಮತ್ತು 14ರಂದು ಜರುಗಲಿದೆ. ಅಂದಹಾಗೆ ಕಳೆದ ಋತುವಿನಲ್ಲಿ ಕ್ರಿಕೆಟಿಗ ಎಂ.ಎಸ್. ಧೋನಿ ಒಡೆತನದ ಚೆನ್ನೈಯಿನ್ ಎಫ್‌ಸಿ ಚಾಂಪಿಯನ್ ಆಗಿತ್ತು.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!