Top

ಎಎಫ್'ಸಿ ಕಪ್: ಬೆಂಗಳೂರು ಎಫ್'ಸಿಗೆ ಕೊನೆಗೂ ಸಿಕ್ತು ಗೆಲುವು


Asianet News Wednesday 16 March 2016 05:17 pm IST Football
ಎಎಫ್'ಸಿ ಕಪ್: ಬೆಂಗಳೂರು ಎಫ್'ಸಿಗೆ ಕೊನೆಗೂ ಸಿಕ್ತು ಗೆಲುವು
16 Mar

ಯಾಂಗೂನ್, ಮಯನ್ಮಾರ್(ಮಾ. 16): ಮಾಜಿ ಭಾರತೀಯ ಫುಟ್ಬಾಲ್ ಚಾಂಪಿಯನ್ ಬೆಂಗಳೂರು ಎಫ್'ಸಿ ತಂಡ ಈ ಬಾರಿಯ ಎಎಫ್'ಸಿ ಕಪ್ ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿದೆ. ಇಂದು ನಡೆದ ತನ್ನ ಗುಂಪಿನ ಮೂರನೇ ಪಂದ್ಯದಲ್ಲಿ ಮಯನ್ಮಾರ್ ದೇಶದ ಅಯೇಯಾವಾಡಿ ಯುನೈಟೆಡ್ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸಿದೆ. ತನ್ನ ಹಿಂದಿನ ಎರಡು ಪಂದ್ಯಗಳನ್ನು ಸೋತಿದ್ದ ಬೆಂಗಳೂರಿಗರು ನಿಟ್ಟುಸಿರುಬಿಡುವಂತಾಗಿದೆ. ಬೆಂಗಳೂರಿನ ಕ್ಯಾಪ್ಟನ್ ಸುನೀಲ್ ಛೇಟ್ರಿ 34ನೇ ನಿಮಿಷದಲ್ಲಿ ಗಳಿಸಿದ ಗೋಲು ತಂಡಕ್ಕೆ ಗೆಲುವಿನ ಗೋಲಾಯಿತು. ಆದರೆ, ದ್ವಿತೀಯಾರ್ಧದಲ್ಲಿ ಆತಿಥೇಯ ಅಯೇಯಾವಾಡಿ ಯುನೈಟೆಡ್ ತಂಡ ಗೋಲು ಗಳಿಸಲು ನಿರಂತರ ಪ್ರಯತ್ನ ಮಾಡಿತು. ಬೆಂಗಳೂರಿಗರ ಪ್ರಬಲ ರಕ್ಷಣಾ ಕೋಟೆಯನ್ನು ಭೇದಿಸಲು ಮಯನ್ಮಾರ್'ನ ತಂಡಕ್ಕೆ ಸಾಧ್ಯವಾಗಲಿಲ್ಲ.

ಕಳೆದ ಬಾರಿ ತಮ್ಮ ಚೊಚ್ಚಲ ಎಎಫ್'ಸಿ ಟೂರ್ನಿಯಲ್ಲಿ ಬೆಂಗಳೂರಿಗರು ಪ್ರೀಕ್ವಾರ್ಟರ್'ಫೈನಲ್ ಪ್ರವೇಶಿಸುವ ಮೂಲಕ ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ತಂಡದಿಂದ ಬಹಳಷ್ಟು ಅಪೇಕ್ಷೆಗಳಿವೆ. ಹೆಚ್ ಗುಂಪಿನಲ್ಲಿ ಜೋಹೋರ್ ಹಾಗೂ ಲಾವೋ ಟೊಯೋಟಾ ವಿರುದ್ಧದ ಮೊದಲೆರಡು ಪಂದ್ಯಗಳನ್ನು ಸೋತಿರುವ ಬೆಂಗಳೂರು ಎಫ್'ಸಿ ಈಗ 3 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬೆಂಗಳೂರಿಗರು ತಮ್ಮ ಮುಂದಿನ ಪಂದ್ಯವನ್ನು ಇದೇ ಅಯೇಯಾವಾಡಿ ಯುನೈಟೆಡ್ ವಿರುದ್ಧವೇ ತವರಿನಲ್ಲಿ ಪಂದ್ಯವಾಡಲಿದೆ. ಏಪ್ರಿಲ್ 13ರಂದು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಬೆಂಗಳೂರಿನ ಪಾಲಿಗೆ ಬಹಳ ಮಹತ್ವದ್ದಾಗಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!