Top

ರಿಯೋ ಕೂಟದಲ್ಲಿ ಸಚಿನ್‌


Asianet News Friday 22 July 2016 09:21 pm IST Other Sports
ರಿಯೋ ಕೂಟದಲ್ಲಿ ಸಚಿನ್‌
22 Jul

ನವದೆಹಲಿ(ಜು.22): ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ)ಯ ಅಧ್ಯಕ್ಷ ಥಾಮಸ್‌ ಬಾಕ್‌ ಆಹ್ವಾನದ ಮೇರೆಗೆ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಮುಂದಿನ ತಿಂಗಳು ಬ್ರೆಜಿಲ್‌ನ ರಿಯೋ ಡಿ ಜನೈರೋಗೆ ಪ್ರಯಾಣ ಬೆಳೆಸಲಿದ್ದಾರೆ. ಭಾರತ ಒಲಿಂಪಿಕ್‌ ಸಂಸ್ಥೆಯ ಗುಡ್‌ವಿಲ್‌ ರಾಯಭಾರಿಯಾಗಿರುವ ಸಚಿನ್‌, ಆಗಸ್ಟ್‌ 2 ರಂದು ಬ್ರೆಜಿಲ್‌ನಲ್ಲಿ ಉಳಿಯಲಿದ್ದಾರೆ. ಅಂದಹಾಗೆ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಕ್ರೀಡಾಕೂಟವೊಂದಕ್ಕೆ ಸಚಿನ್‌ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ವೇಳೆ ಒಲಿಂಪಿಕ್ಸ್‌ ಕ್ರೀಡಾಗ್ರಾಮದಲ್ಲಿ ಭಾರತದ ಸ್ಪರ್ಧಿಗಳನ್ನು ಭೇಟಿಯಾಗಿ ಶುಭಾಶಯ ತಿಳಿಸಲಿದ್ದು, ದೇಶದ ಗೌರವವನ್ನು ಎತ್ತಿ ಹಿಡಿಯಲು ಹೆಚ್ಚು ಪದಕಗಳನ್ನು ಗೆಲ್ಲುವಂತೆ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬುವುದಾಗಿ ಸಚಿನ್‌ ಹೇಳಿದ್ದಾರೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!