Top

ಇಂದು ಭಾರತೀಯ ಕ್ರೀಡಾ ದಿನ: ಕ್ರೀಡಾ ಸಾಧಕರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಪ್ರಶಸ್ತಿ ಪ್ರಧಾನ


Asianet News Monday 29 August 2016 01:13 pm IST Specials
ಇಂದು ಭಾರತೀಯ ಕ್ರೀಡಾ ದಿನ: ಕ್ರೀಡಾ ಸಾಧಕರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಪ್ರಶಸ್ತಿ ಪ್ರಧಾನ
29 Aug

ರಿಯೋ ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ, ಈ ಬಾರಿ ಪಿವಿ ಸಿಂಧು, ದೀಪಾ ಕರ್ಮಾಕರ್, ಜಿತು ರೈ, ಸಾಕ್ಷಿ ಮಲೀಕ್'​ಗೆ 2016ನೇ ಸಾಲಿನ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಬ್ಯಾಡ್ಮಿಂಟನ್​ನಲ್ಲಿ ಬೆಳ್ಳಿ ಗೆದ್ದ ಸಿಂಧುಗೆ ಮತ್ತು ಕುಸ್ತಿಯಲ್ಲಿ ಕಂಚು ಗೆದ್ದ ಸಾಕ್ಷಿ ಮಲಿಕ್​ಗೆ ಖೇಲ್​ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ರಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಹಾಗೂ ಶೂಟರ್ ಜೀತು ರಾಯ್​ಗೆ ಖೇಲ್​ ರತ್ನ ಪ್ರಶಸ್ತಿ ನೀಡಲಾಯಿತು. ಕನ್ನಡದ ಹಾಕಿ ಆಟಗಾರ ವಿ.ಆರ್​ ರಘುನಾಥ್​ಗೆ ಅರ್ಜುನ ಪ್ರಶಸ್ತಿ, ದೀಪಾ ಕರ್ಮಾಕರ್​ ಕೋಚ್​ ಸೇರಿ 6 ಕೋಚ್​ಗಳಿಗೆ ಪ್ರಶಸ್ತಿ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸನ್ಮಾನಿಸಿದರು. ಜೀವಮಾನದ ಸಾಧನೆಗಾಗಿ ಮೂವರಿಗೆ ಧ್ಯಾನ್​ಚಂದ್​ ಪ್ರಶಸ್ತಿ   ನೀಡಲಾಯ್ತು.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!