Top

ಧ್ಯಾನ್ ಚಂದ್ ಬಗೆಗಿನ ಕುತೂಹಲಕಾರಿ ಮಾಹಿತಿ ನಿಮ್ಮ ಮುಂದೆ


Asianet News Monday 29 August 2016 07:19 pm IST Specials
ಧ್ಯಾನ್ ಚಂದ್ ಬಗೆಗಿನ ಕುತೂಹಲಕಾರಿ ಮಾಹಿತಿ ನಿಮ್ಮ ಮುಂದೆ
29 Aug

ಬೆಂಗಳೂರು(ಆ.29): ಭಾರತದ ಶ್ರೇಷ್ಟ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ 111ನೇ ಹುಟ್ಟುಹಬ್ಬ ದೇಶದಾದ್ಯಂತ ಆಚರಿಸಲಾಗುತ್ತಿದೆ. ತನ್ನ ಮಾಂತ್ರಿಕ ಕೈಚಳಕದಿಂದ ಎದುರಾಳಿಯನ್ನು ನಿಬ್ಬೆರುಗಾಗುವಂತೆ ಮಾಡಿದ ಕಲಾವಿದ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.

ದಿಗ್ಗಜ ಹಾಕಿ ಪಟುವಿನ ಕುರಿತಾದ ಕೆಲವು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ:

ಚಂದ್ರ ಬೆಳಕಿನಲ್ಲಿ ಹಾಕಿ ಅಭ್ಯಾಸ ಮಾಡುವುದನ್ನು ನೋಡಿದ ಬಳಿಕ ಧ್ಯಾನ್ ಸಿಂಗ್ ಅವರನ್ನು ಅವರ ಜೊತೆಗಾರರು ಧ್ಯಾನ್ ಸಿಂಗ್ ಎಂದು ಕರೆಯಲಾರಂಭಿಸಿದರು.

16ನೇ ವಯಸ್ಸಿಗೆ ಸೇನೆ ಸೇರಿದ ಧ್ಯಾನ್ ಚಂದ್, ತಮ್ 56ನೇ ವಯಸ್ಸಿನಲ್ಲಿ ಮೇಜರ್ ಹುದ್ದೆಯೊಂದಿಗೆ ನಿವೃತ್ತಿಯಾದರು.

ಧ್ಯಾನ್ ಚಂದ್ 1926ರಿಂದ 1948ರ ವರೆಗಿನ ವೃತ್ತಿ ಜೀವನದಲ್ಲಿ ಬರೋಬ್ಬರಿ 1000 ಗೋಲುಗಳನ್ನು ಗಳಿಸಿದ್ದಾರೆ.

ದೆಹಲಿಯಲ್ಲಿರುವ ರಾಷ್ಟ್ರೀಯ ಹಾಕಿ ಕ್ರೀಡಾಂಗಣಕ್ಕೆ 2002ರಲ್ಲಿ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ ಎಂದು ಹೆಸರಿಡಲಾಗಿದೆ.

ಧ್ಯಾನ್ ಚಂದ್ ಆಟವನ್ನು ಕಣ್ತುಂಬಿಕೊಂಡ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಜರ್ಮನ್ ಪೌರತ್ವ ನೀಡಲು ಮುಂದೆ ಬಂದಿದ್ದ.

ಧ್ಯಾನ್ ಚಂದ್ ನೇತೃತ್ವದಲ್ಲಿ ಭಾರತ ತಂಡವು 1928, 1932 ಹಾಗೂ 1936ರಲ್ಲಿ ಒಲಿಂಪಿಕ್ಸ್'ನಲ್ಲಿ ಚಿನ್ನದ ಪದಕ ಗೆದ್ದಕೊಂಡಿತು.

1932ರ ಬೇಸಿಗೆ ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಯುಎಸ್ಎ ಎದುರು 24-1 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿತ್ತು. ಆ ಪಂದ್ಯದಲ್ಲಿ ಧ್ಯಾನ್ ಚಂದ್ ಒಬ್ಬರೇ 8 ಗೋಲು ಬಾರಿಸಿದ್ದರು. ಅವರ ಸಹೋದರ ರೂಪ್ ಸಿಂಗ್ 10 ಗೋಲು ಬಾರಿಸಿದ್ದರು. 1932ರ ಒಲಿಂಪಿಕ್ಸ್'ನಲ್ಲಿ ಧ್ಯಾನ್ ಚಂದ್ ಒಬ್ಬರೇ 25 ಗೋಲುಗಳನ್ನು ಸಿಡಿಸಿದ್ದರು.

ಹಾಕಿ ಮಾಂತ್ರಿಕನಿಗೆ 1956ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ಆದಾಗಿಯೂ ಇಲ್ಲಿಯವರೆಗೂ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿಲ್ಲ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!