Top

ಕಬಡ್ಡಿ ಆಟಗಾರರಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ: ನವ್ಯಶ್ರೀ ಅಳಲು


Asianet News Friday 02 September 2016 01:13 pm IST Specials
ಕಬಡ್ಡಿ ಆಟಗಾರರಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ:  ನವ್ಯಶ್ರೀ ಅಳಲು
02 Sep

ಸಿ.ಎ.ಇಟ್ನಾಳಮಠ ಅಥಣಿ

ಪ್ರೊ ಕಬಡ್ಡಿ ಲೀಗ್‌ನಂತಹ ಟೂರ್ನಿಗಳಿಂದಾಗಿ ದೇಸೀ ಕ್ರೀಡೆಯಾದ ಕಬಡ್ಡಿ ಆಟಗಾರರಿಗೆ ಜನಪ್ರಿಯತೆ ಬಂದಿದ್ದರೂ, ಸರ್ಕಾರದ ವತಿಯಿಂದ ಕಬಡ್ಡಿ ಕ್ರೀಡೆಗೆ ಸಿಗಬೇಕಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಳು ನವ್ಯಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡ ಅವರು, ವಿದೇಶದಲ್ಲಿ ಕಬಡ್ಡಿ ದಿನೇ ದಿನೆ ಜನಪ್ರಿಯತೆ ಪಡೆಯುತ್ತಿದೆ. ಅಲ್ಲಿನ ಸರ್ಕಾರ, ಸಂಘ ಸಂಸ್ಥೆಗಳು ಸಾಕಷ್ಟು ಪೋತ್ಸಾಹ ನೀಡುತ್ತಿವೆ. ಇದರಿಂದ ಅನೇಕ ವಿದೇಶಿ ತಂಡಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಠ ಪ್ರತಿ ಸ್ಪರ್ಧಿಗಳಾಗಿ ಸ್ಪರ್ಧೆ ಒಡ್ಡಿ ಗೆಲವು ಸಾಧಿಸುತ್ತೆದೆ. ಆದರೆ, ನಮ್ಮಲ್ಲಿ ಇಂಥ ಬೆಳವಣಿಗೆಯಾಗಿಲ್ಲ ಎಂದರು.

ನಮ್ಮ ದೇಶದಲ್ಲಿ ಗೆಲವು ಸಾಧಿಸಿದ ನಂತರ ಸಾಕಷ್ಟು ಪೋತ್ಸಾಹವನ್ನು ಸರ್ಕಾರ,ಸಂಘ, ಸಂಸ್ಥೆಗಳು ನೀಡುತ್ತಿವೆ. ಆದರೆ ಅದರ ಬದಲಾಗಿ ಕ್ರೀಡೆಯಲ್ಲಿ ಭಾಗವಹಿಸಿ ಸ್ಪರ್ಧೆ ಒಡ್ಡುತಿರುವ ಪ್ರತಿಭೆಗಳಿಗೆ ಪೋತ್ಸಾಹ ನೀಡಬೇಕು. ಇದರಿಂದ ಕ್ರೀಡಾ ಪಟುಗಳು ಶ್ರದ್ಧೆವಹಿಸಿ ಆಟದಲ್ಲಿ ಪರಿಣಿತರಾಗುತ್ತಾರೆ. ಸಾಕಷ್ಟು ಬಲಿಷ್ಠ ಕ್ರೀಡಾ ತಂಡಗಳು ಬೆಳೆಯುತ್ತವೆ ಎಂದು ನವ್ಯಾಶ್ರೀ ಹೇಳಿದಳು.

ಮೀಸಲಾತಿ ಬೇಕು: ಕ್ರೀಡಾಪಟುಗಳಿಗೆ ಸರ್ಕಾರಿ, ಅರೆ ಸರ್ಕಾರಿ ಸಂಘ ಸಂಸ್ಥೆಗಳಲ್ಲಿ ಐಟಿಬಿಟಿ ರೀತಿಯ ಕ್ಷೇತ್ರಗಳಲ್ಲಿ ಉದ್ಯೋಗ ಮೀಸಲಾತಿ ಸಿಕ್ಕಿದರೆ ಒಳ್ಳೆದು. ಕಾರ್ಪೋರೇಟ್ ವಲಯವೂ ಕಬಡ್ಡಿ ಕ್ರೀಡಾಳುಗಳಿಗೆ ಉದ್ಯೋಗ ನೀಡಲು ಮುಂದೆ ಬರಬೇಕು. ಹಾಗಾದರೆ, ಭಾರತದ ಕೀರ್ತಿಯನ್ನು ವಿಶ್ವದಲ್ಲಿ ಬೆಳಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಪ್ರತಿಭೆಗಳಿಗೆ ಜಾಗ ಸಿಗಬೇಕು: ಮಹಿಳೆಯರು ಅದರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ಮಹಿಳೆಯರು ಸಾಕಷ್ಟು ಕ್ರೀಡಾ ಪಟುಗಳಿದ್ದಾರೆ. ಅವರಿಗೆ ಅವಕಾಶ ಇಲ್ಲದ್ದಕ್ಕೆ ಬೆಳಕಿಗೆ ಬರುತ್ತಿಲ್ಲ. ಇಂಥ ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗಬೇಕು ಎಂದ ಅವರು, ಪಾಲಕರು ನಮ್ಮ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ. ಕ್ರೀಡೆಯಲ್ಲಿ ಭಾಗವಹಿಸುವಂತೆ ಪೋತ್ಸಾಹ ನೀಡಬೇಕು. ಹೆಣ್ಣು ಮಕ್ಕಳನ್ನು ಬೇಗ ಮದುವೆ ಮಾಡಿ ಅವರ ಪ್ರತಿಭೆ ಕಮರುವಂತೆ ಮಾಡಬಾಡಬಾರದು ಎಂದು ಮನವಿ ಮಾಡಿದರು.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!