Top

ವಿಶ್ವ ಬ್ಯಾಟಿಂಗ್ ದಂತಕತೆಯಿಂದ 'ಸುವರ್ಣ ಪದಗಳ' ಸಲಹೆಗಳನ್ನು ಪಡೆದ ಕೊಹ್ಲಿ, ಕನ್ನಡಿಗ ರಾಹುಲ್


Asianet News Tuesday 19 July 2016 05:17 pm IST Specials
ವಿಶ್ವ ಬ್ಯಾಟಿಂಗ್ ದಂತಕತೆಯಿಂದ 'ಸುವರ್ಣ ಪದಗಳ' ಸಲಹೆಗಳನ್ನು ಪಡೆದ ಕೊಹ್ಲಿ, ಕನ್ನಡಿಗ ರಾಹುಲ್
19 Jul

ಆಂಟಿಗುವಾ(ಜು.19): ಭಾರತ ತಂಡ ಟೆಸ್ಟ್ ಪಂದ್ಯಗಳನ್ನು ಆಡಲು ವೆಸ್ಟ್ ಇಂಡೀಸ್'ಗೆ ಪ್ರವಾಸ ತೆರಳಿದ್ದು, ಈ ಸಂದರ್ಭದಲ್ಲಿ ಭಾರತದ ಆಟಗಾರರರು ವೆಸ್ಟ್ ಇಂಡೀಸ್'ನ 62 ವರ್ಷದ ಬ್ಯಾಟಿಂಗ್ ದಂತಕತೆ ವಿವಿಯನ್ ರಿಚರ್ಡ್ಸ್ ಅವರನ್ನು ಭೇಟಿ ಮಾಡಿ 'ಸುವರ್ಣ ಪದಗಳ' ಸಲಹೆಗಳನ್ನು ಪಡೆದಿದ್ದಾರೆ.

ಭಾರತದ  ಆಟಗಾರರಾದ ವಿರಾಟ್ ಕೊಹ್ಲಿ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮುರುಳಿ ವಿಜಯ್ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್  ಅವರು ವಿಶ್ವ ಬ್ಯಾಟಿಂಗ್ ದಂತಕತೆ ವಿವಿಯನ್ ರಿಚರ್ಡ್ಸ ಅವರನ್ನು ಭೇಟಿ ಮಾಡಿ ತಮ್ಮ ಕ್ರಿಕೆಟ್ ಭವಿಷ್ಯಕ್ಕೆ ಬೇಕಾದ ಸಲಹೆಗಳನ್ನು ಪಡೆದುಕೊಂಡಿದ್ದಾರೆ.

'ವಿವಿಯನ್ ರಿಚರ್ಡ್ಸ್ ಸರ್ ಅವರ ಭೇಟಿ ಮರೆಯಲಾಗದ ಅದ್ಭುತ ಕ್ಷಣ. ಅವರಿಂದ ಸುವರ್ಣ ಪದಗಳ ಸಲಹೆಗಳನ್ನು ಪಡೆದಿದ್ದೇನೆ ಎಂದು' ಕೊಹ್ಲಿ ಟ್ವೀಟ್ ಮಾಡಿದ್ದಾರೆ.

'ಸಣ್ಣ ಹುಡುಗನಾಗಿದ್ದಿನಿಂದ ನಾನು ಅವರ ಅಭಿಮಾನಿ, ಅವರ ನೀಡಿದ ಕೆಲವು ಸಲಹೆಯೇ ನಮಗೆ ಸಾಕಷ್ಟು ರೀತಿಯಲ್ಲಿ ಅನುಕೂಲವಾಗಲಿದೆ' ಎಂದು ಕೆ.ಎಲ್. ರಾಹುಲ್ ಟ್ವೀಟ್ ಮಾಡಿದ್ದಾರೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ನಾಲ್ಕು ಟೆಸ್ಟ್'ಗಳಲ್ಲಿ ಮೊದಲ ಟೆಸ್ಟ್ ಜುಲೈ 21 ರಿಂದ  ನಾರ್ಥ್ ಸೌಂಡ್'ನಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.  Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!