Top

ರಿಯೊ ಸಾಧಕರಿಗೆ ಖೇಲ್‌ ರತ್ನ ಪ್ರದಾನ


Asianet News Monday 29 August 2016 08:20 pm IST Specials
ರಿಯೊ ಸಾಧಕರಿಗೆ ಖೇಲ್‌ ರತ್ನ ಪ್ರದಾನ
29 Aug

ನವದೆಹಲಿ(ಆ.29): ರಿಯೊ ಕೂಟದಲ್ಲಿ ಚಾರಿತ್ರಿಕ ಪದಕ ಗೆದ್ದು ಸಾಧನೆ ಮಾಡಿದ್ದವರನ್ನೂ ಒಳಗೊಂಡಂತೆ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸೋಮವಾರ ರಾಷ್ಟ್ರಪತಿ ಭವನದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಭಾರತ ಹಾಕಿ ಕಂಡ ಮಹಾನ್‌ ಆಟಗಾರ ಮೇಜರ್‌ ಧ್ಯಾನ್‌ಚಂದ್‌ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್‌ 29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಾರಿತ್ರಿಕ ಪದಕ ತಂದಿತ್ತ ಬ್ಯಾಡ್ಮಿಂಟನ್‌ ತಾರೆ ಪಿ ವಿ ಸಿಂಧು, ಕುಸ್ತಿಪಟು ಸಾಕ್ಷಿ ಮಲಿಕ್‌ ಹಾಗೂ ಪದಕ ಗೆಲ್ಲಲು ವಿಫಲವಾದರೂ, ಮಹಿಳಾ ವಾಲ್ಟ್‌ ಜಿಮ್ನಾಸ್ಟಿಕ್‌ ಸ್ಪರ್ಧೆಯಲ್ಲಿ ಫೈನಲ್‌ ತಲುಪಿ ನಾಲ್ಕನೇ ಸ್ಥಾನ ಪಡೆದ ಜಿಮ್ನಾಸ್ಟ್‌ ದೀಪಾ ಕರ್ಮಾಕರ್‌ ಅಲ್ಲದೆ, ಶೂಟರ್‌ ಜಿತು ರೈಗೆ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್‌ಗಾಂಧಿ ಖೇಲ್‌ ರತ್ನ ನೀಡಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸನ್ಮಾನಿಸಿದರು.

ನಾಲ್ವರು ಅಥ್ಲೀಟ್‌ಗಳು ಖೇಲ್‌ರತ್ನ ಪಡೆದದ್ದು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬುದು ಗಮನಾರ್ಹ. 2009ರಲ್ಲಿ ಬಾಕ್ಸರ್‌ಗಳಾದ ವಿಜೇಂದರ್‌ ಸಿಂಗ್‌ ಹಾಗೂ ಮೇರಿ ಕೋಮ್‌ ಮತ್ತು ಕುಸ್ತಿಪಟು ಸುಶೀಲ್‌ ಕುಮಾರ್‌ ಖೇಲ್‌ರತ್ನ ಪ್ರಶಸ್ತಿ ಸ್ವೀಕರಿಸಿದ್ದರು.

ಅಂದಹಾಗೆ ಖೇಲ್‌ ರತ್ನ ಪ್ರಶಸ್ತಿಯು 7.5 ಲಕ್ಷ ನಗದು, ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದ್ದರೆ, ಕನ್ನಡಿಗ ವಿ.ಆರ್‌. ರಘುನಾಥ್‌ (ಹಾಕಿ) ಸೇರಿದಂತೆ ಅರ್ಜುನ ಪ್ರಶಸ್ತಿ ಪಡೆದ ಹದಿನೈದು ಮಂದಿ ಕ್ರೀಡಾ ಸಾಧಕರು 5 ಲಕ್ಷ ನಗದು, ಮೂರ್ತಿ ಮತ್ತು ಪ್ರಶಸ್ತಿ ಪತ್ರ ಸ್ವೀಕರಿಸಿದರು.

ಇನ್ನು ರಿಯೊ ಕೂಟದ ಮಹಿಳೆಯರ 3000 ಮೀಟರ್‌ ಸ್ಟೀಪಲ್‌ಚೇಸ್‌ ದೂರ ಅಂತರದ ಓಟದಲ್ಲಿ ಫೈನಲ್‌ ತಲುಪಿ 10ನೇ ಸ್ಥಾನ ಗಳಿಸಿ ಲಲಿತಾ ಬಾಬರ್‌, ಬಾಕ್ಸರ್‌ ಶಿವಥಾಪ, ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಸೇರಿ ಒಟ್ಟು ಹದಿನೈದು ಮಂದಿ ಅರ್ಜುನ ಪ್ರಶಸ್ತಿ ಪಡೆದರು.

ಏತನ್ಮಧ್ಯೆ ಈ ಋುತುವಿನ ದ್ರೋಣಾಚಾರ‍್ಯ ಪ್ರಶಸ್ತಿಯು ರಾಜ್ಯದ ಈಜು ತರಬೇತುದಾರ ಎಸ್‌. ಪ್ರದೀಪ್‌ ಕುಮಾರ್‌ ಸೇರಿ ಈ ಬಾರಿ ಆರು ಮಂದಿಗೆ ಪ್ರದಾನವಾಯಿತು.

ಅರ್ಜುನ ಕ್ರೀಡಾ ಪ್ರಶಸ್ತಿ ಸಿಕ್ಕಿರುವುದು ಮುಂದಿನ ದಿನಗಳಲ್ಲಿ ಇನ್ನಷ್ಟುಉತ್ತಮ ಪ್ರದರ್ಶನ ನೀಡಲು ಉತ್ತೇಜನ ಸಿಕ್ಕಂತಾಗಿದೆ. ಕ್ರೀಡಾಪಟುಗಳನ್ನು ಹೀಗೆ ಗುರುತಿಸುವುದು ಕೇವಲ ಆಟಗಾರನನ್ನಷ್ಟೇ ಅಲ್ಲದೆ, ತಂಡದ ನೈತಿಕ ಶಕ್ತಿಯನ್ನೂ ಉಜ್ಜೀವನಗೊಳಿಸುವಂಥದ್ದು- ವಿ.ಆರ್‌. ರಘುನಾಥ್‌ ಭಾರತ ಹಾಕಿ ಪಟು

ಖೇಲ್‌ರತ್ನ ವಿಜೇತರು: (ಪ್ರಶಸ್ತಿ ಮೊತ್ತ . 7.5 ಲಕ್ಷ)

ಪಿ ವಿ ಸಿಂಧು (ಬ್ಯಾಡ್ಮಿಂಟನ್‌), ಸಾಕ್ಷಿ ಮಲಿಕ್‌ (ಕುಸ್ತಿ), ದೀಪಾ ಕರ್ಮಾಕರ್‌ (ಜಿಮ್ನಾಸ್ಟಿಕ್‌), ಜಿತು ರೈ (ಶೂಟಿಂಗ್‌)

ದ್ರೋಣಾಚಾರ‍್ಯ ವಿಜೇತರು (ಪ್ರಶಸ್ತಿ ಮೊತ್ತ: . 5 ಲಕ್ಷ)

ಎನ್‌. ರಮೇಶ್‌ (ಅಥ್ಲೆಟಿಕ್ಸ್‌), ಸಾಗರ್‌ ಮಲ್‌ ದಯಾಳ್‌ (ಬಾಕ್ಸಿಂಗ್‌), ರಾಜ್‌ಕುಮಾರ್‌ ಶರ್ಮಾ (ಕ್ರಿಕೆಟ್‌), ಬಿಶ್ವೇಶ್ವರ್‌ ನಂದಿ (ಜಿಮ್ನಾಸ್ಟಿಕ್‌), ಎಸ್‌. ಪ್ರದೀಪ್‌ ಕುಮಾರ್‌ (ಈಜು-ಜೀವಮಾನ), ಮಹಾಬೀರ್‌ ಸಿಂಗ್‌ (ಕುಸ್ತಿ-ಜೀವಮಾನ)

ಅರ್ಜುನ ಪ್ರಶಸ್ತಿ ವಿಜೇತರು (ಪ್ರಶಸ್ತಿ ಮೊತ್ತ: 5 . ಲಕ್ಷ)

ರಜತ್‌ ಚೌಹಾಣ್‌ (ಆರ್ಚರಿ), ಲಲಿತಾ ಬಾಬರ್‌ (ಅಥ್ಲೆಟಿಕ್ಸ್‌), ಸೌರವ್‌ ಕೊಠಾರಿ (ಬಿಲಿಯರ್ಡ್ಸ್ ಮತ್ತು ಸ್ನೂಕರ್‌), ಶಿವ ಥಾಪ (ಬಾಕ್ಸಿಂಗ್‌), ಅಜಿಂಕ್ಯ ರಹಾನೆ (ಕ್ರಿಕೆಟ್‌), ಸುಬ್ರತಾ ಪೌಲ್‌ (ಫುಟ್ಬಾಲ್‌), ರಾಣಿ (ಹಾಕಿ), .ಆರ್‌. ರಘುನಾಥ್‌ (ಹಾಕಿ), ಗುರುಪ್ರೀತ್‌ ಸಿಂಗ್‌ (ಶೂಟಿಂಗ್‌), ಅರ್ಪೂ ಚಾಂಡೇಲಾ (ಶೂಟಿಂಗ್‌), ಸೌಮ್ಯಜಿತ್‌ ಘೋಷ್‌ (ಟೇಬಲ್‌ ಟೆನಿಸ್‌), ನೇಶ್‌ ಫೋಗಟ್‌ (ಕುಸ್ತಿ), ಅುತ್‌ ಕುಮಾರ್‌ (ಕುಸ್ತಿ), ಸಂದೀಪ್‌ ಮನ್‌ (ಪ್ಯಾರಾಥ್ಲೀಟ್‌), ರೇಂದರ್‌ ಸಿಂಗ್‌ (ಕುಸ್ತಿ-ಶ್ರವಣ ದೋಷ)

ಧ್ಯಾನ್‌ಚಂದ್‌ ವಿಜೇತರು (ಪ್ರಶಸ್ತಿ ಮೊತ್ತ: 5 . ಲಕ್ಷ)

ಸತ್ತಿ ಗೀತಾ (ಅಥ್ಲೆಟಿಕ್ಸ್‌), ಸಿಲ್ವಾನಸ್‌ ಡುಂಗ್‌ ಡುಂಗ್‌ (ಹಾಕಿ), ರಾಜೇಂದ್ರ ಪ್ರಹ್ಲಾದ್‌ ಶೆಲ್ಕೆ (ರೋಯಿಂಗ್‌).Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!