Top

ಬೆಳ್ಳಿ ಭಾಗ್ಯಕ್ಕೀಗ ಚಿನ್ನದ ಮೆರುಗು


Asianet News Friday 02 September 2016 09:21 pm IST Specials
ಬೆಳ್ಳಿ ಭಾಗ್ಯಕ್ಕೀಗ ಚಿನ್ನದ ಮೆರುಗು
02 Sep

ನವದೆಹಲಿ(ಸೆ.2): ರಿಯೊ ಕೂಟದಲ್ಲಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ಪದಕದಿಂದ ವಂಚಿತವಾಗಿದ್ದ ಯೋಗೇಶ್ವರ್‌ ದತ್‌ ಯೋಗಕ್ಕೆ ಪಾರವೇ ಇಲ್ಲವೆಂಬಂತೆ ಲಂಡನ್‌ ಕೂಟದಲ್ಲಿ ಅವರು ಗೆದ್ದಿದ್ದ ಕಂಚಿಗೆ ಈಗ ಚಿನ್ನದ ಮೆರುಗು ಬಂದಂತಿದೆ.

‘ಹಿಂದೂಸ್ತಾನ್‌ ಟೈಮ್ಸ್‌’ನ ವರದಿ ಒಂದೊಮ್ಮೆ ನಿಜವೇ ಆದರೆ ಯೋಗೇಶ್ವರ್‌ ದತ್‌ ಚಿನ್ನದ ಪದಕವನ್ನು ಪಡೆಯುವುದು ಖಚಿತವಾಗಲಿದೆ. ಹಾಗೇನಾದರೂ ಆದರೆ, ಭಾರತಕ್ಕೆ ಕುಸ್ತಿ ವಿಭಾಗದಲ್ಲಿ ಮೊಟ್ಟಮೊದಲ ಚಿನ್ನದ ಪದಕ ದಕ್ಕಿದಂತಾಗುತ್ತದೆ.

ಸದ್ಯ ಯೋಗೇಶ್ವರ್‌ ದತ್‌ ಅವರಿಂದ ಪಡೆಯಲಾಗಿದ್ದ ಸ್ಯಾಂಪಲ್ಸ್‌ನ ಪರೀಕ್ಷಾ ವರದಿ ಏನಾದರೂ ನಿರ್ದೋಷವೆಂಬುದು ಖಚಿತವಾದರೆ, ಅವರು ಚಿನ್ನದ ಪದಕಕ್ಕೆ ಕೊರೊಳೊಡ್ಡುವುದು ಬಹುತೇಕ ಖಾತ್ರಿಯಾಗಲಿದೆ. ಇದರೊಂದಿಗೆ ವೈಯಕ್ತಿಕ ವಿಭಾಗದಲ್ಲಿ ಅಭಿನವ್‌ ಬಿಂದ್ರಾ (ಶೂಟರ್‌) ನಂತರದ ಸ್ವರ್ಣ ಸಾಧಕ ಎನಿಸಿಕೊಳ್ಳಲಿದ್ದಾರೆ.

ಅಂದಹಾಗೆ ಅಜರ್‌ಬೈಜಾನ್‌ನ ತೊಗ್ರುಲ್‌ ಅಸ್ಗರೋವ್‌ ಉದ್ದೀಪನಾ ಮದ್ದು ಸೇವನೆ ಪ್ರಕರಣವನ್ನು ವಿಶ್ವ ಉದ್ದೀಪನಾ ತಡೆ ಘಟಕ (ವಾಡಾ) ಇನ್ನಷ್ಟೇ ಅಧಿಕೃತವಾಗಿ ಯುನೈಟೆಡ್‌ ವಲ್ಡ್‌ರ್‍ ರೆಸ್ಲಿಂಗ್‌ (ಯೂಡಬ್ಲ್ಯೂಡಬ್ಲ್ಯೂ)ಗೆ ತಿಳಿಸಬೇಕಿದೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!