Top

ರಿಯೋದಲ್ಲಿ ಸೋತ ಯೋಗೇಶ್ವರ್ ದತ್'ಗೆ ಲಂಡನ್ ಒಲಿಂಪಿಕ್ಸ್'ನಲ್ಲಿ ಚಿನ್ನದ ಪದಕದ ಸಾಧ್ಯತೆ


Asianet News Saturday 03 September 2016 10:10 am IST Specials
ರಿಯೋದಲ್ಲಿ ಸೋತ ಯೋಗೇಶ್ವರ್ ದತ್'ಗೆ ಲಂಡನ್ ಒಲಿಂಪಿಕ್ಸ್'ನಲ್ಲಿ ಚಿನ್ನದ ಪದಕದ ಸಾಧ್ಯತೆ
03 Sep

ಅದೃಷ್ಠ ಎಂದರೆ ಇದೇ ಇರಬೇಕು, ನಾವು ಒಂದು ಕೊಟ್ಟರೆ ನೂರು ನಮ್ಮ ಹುಡುಕಿಕೊಂಡು ಬರುತ್ತದೆ ಎನ್ನುವುದು ಇದಕ್ಕೆ ಇರಬೇಕು. ರಿಯೋ ಒಲಂಪಿಕ್ಸ್'ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ಯೋಗೇಶ್ವರ್ ದತ್ ಲಂಡನ್ ಒಲಿಂಪಿಕ್ಸ್'ನಲ್ಲಿ ಕಂಚಿನ ಪದಕ ಪಡೆದಿದ್ದರೂ ಸಹ ಬೆಳ್ಳಿ ಪದಕಕ್ಕೆ ಅಪ್ಡೇಟ್ ಆಗಿತ್ತು. ಆದರೆ ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು. ಆದರೆ ಈಗ ಅದೇ ಬೆಳ್ಳಿ ಪದಕ ಚಿನ್ನಕ್ಕೆ ಅಪ್ಡೇಟ್ ಆಗಲಿದೆ.

ಲಂಡನ್ ಒಲಿಂಪಿಕ್ಸ್'ನಲ್ಲಿ ಈ ಮೊದಲು ಬೆಳ್ಳಿ ಪದಕ ಪಡೆದಿದ್ದ ಕುಡುಕೋವ್ಸ್ ಉದ್ಧೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಹಿನ್ನಲೆಯಲ್ಲಿ ಬೆಳ್ಳಿ ಪದಕ ಯೋಗೇಶ್ವರ್ ದತ್ ಪಾಲಾಗಿತ್ತು. ಈ ವೇಳೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ಕುಡುಕೋವ್ಸ್ ನಿಧನವಾಗಿರುವ ಹಿನ್ನಲೆಯಲ್ಲಿ ಬೆಳ್ಳಿ ಪದಕ ಅವರ ಕುಟುಂಬದವರ ಬಳಿಯೇ ಉಳಿಯಲಿ ಎಂದು ಹೇಳಿದ್ದರು.

ಆದರೆ ಮತ್ತೆ ಯೋಗೇಶ್ವರ್ ದತ್ ಅದೃಷ್ಠ ಕುಲಾಯಿಸಿದ್ದು, ಅಂದಿನ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸ್ಪರ್ಧಿಯೂ ಉದ್ದೀಪನ ಮದ್ದು ಸೇವನೆಯಲ್ಲಿ ಸಿಕ್ಕಿ ಬಿದ್ದಿರುವ ಹಿನ್ನಲೆಯಲ್ಲಿ ಚಿನ್ನದ ಪದಕ ಯೋಗೇಶ್ವರ್ ಪಾಲಾಗಲಿದೆ ಎನ್ನಲಾಗಿದೆ.
ಲಂಡನ್ ಒಲಿಂಪಿಕ್ಸ್'ನಲ್ಲಿ ಅಝರ್ ಬೈಜಾನ್ನ ತೊಗರುಲ್ ಅಸ್ಗ್ರೋವ್ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು. ಆದರೆ ಅವರು ಉದ್ಧೀಪನ ಮದ್ದು ಸೇವಿಸಿ ಸ್ಪರ್ಧಿಸಿದ್ದು ಸಾಭೀತಾಗಿರುವ ಹಿನ್ನಲೆಯಲ್ಲಿ ಯೋಗೇಶ್ವರ್ ದತ್'ಗೆ ಚಿನ್ನದ ಪದಕ ದೊರೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!